ಶ್ರೀಮಂತ

ಶ್ರೀಮಂತ

ಕಾಸುಂಡವನ ಒಡನೆ
ಅರಿಯಲು ಬಹುದು
ದೇಹ ಸುತ್ತಿಹುದು
ಸಂಪತ್ತಿನ ಜಾಲದಲಿ
ಸದಾ ಗಂಟಿವನ ಮುಖಮುದ್ರೆ
ಕಂಡರೂ ಕಾಣದಂತೆ ನಟಿಸಿ
ಮಾಡುವರು ಪರರ ನಿಂದೆ
ಕಾಸಿಲ್ಲದವನ ನೋಡಿ ಹೇಸುವರು
ತೋರುವರು ಬಲು ಗಂಭೀರ
ಹಾವ ಭಾವ!
ಒಡನೆ ಮಾತಾಡಲು
ಕಾಸುದುರಿ ಹೋಗುವ ಭಯವು
ಕಾಸುಂಡು ತೇಗಿದವರಿಗೆ
ಒಡನೆ ಗುರುತಿಸುವರಿವರು
ಸಡಿಲಿಸುವರು ಬಿಗಿ ಗಲ್ಲಗಳ
ಪ್ರೀತಿ ಪ್ರೇಮಕೆ ಕಾಸು ತೆರಬೇಕೆ?
ಸವಿ ನುಡಿಯಲು ಕಾಸು ತೆರಬೇಕೆ?
ಶುಭ್ರ ನಗುವಿಗೆ ಕಾಸು ತೆರಬೇಕೆ?
ಹೃದಯವಂತಿಕೆಗೆ ಕಾಸು ತೆರಬೇಕೆ?
ಇದಾವುದೂ ಸಿಗದು ಕಾಸಿಗೆ!
ಎಂಬ ಸತ್ಯವನರಿಯರು ಇವರು ಏಕೆ?

Leave a Reply