ಸಂಕ್ರಾಂತಿ

ಸಂಕ್ರಾಂತಿ

ದಿನಕರನಿಂದು ಮರಳಿದ
ವಂದಿಸುತ ಕರ್ಕನ ದಕ್ಷಿಣದಿ
ಇಟ್ಟನಡಿಯ ಉತ್ತರದಿ
ಬದಲಿಸೆ ಸ್ಥಾನವ ಏರಿದ ರಥವನು
ನೇಸರನಿಂದು ಮಕರನಲಿ
ರಶ್ಮಿಯ ಭುವನೆಗೆ ಪಸರಿಸುತಲಿ
ಸಂಕ್ರಾಂತಿಯು ಇಂದು ಕಾಲಿಡುತಲಿ
ಕುಡಿ ಮೀಸೆ ತಿರುವುತೆ ಗಿಡಮರಬಳ್ಳಿ
ಕಿವಿಗಿಂಪು ನೀಡೆ ಕೋಗಿಲೆಯ ಇಂಚರ
ನಡುಗಿ ನಲುಗಿದ ಮೈಯಿಗೆ ನೀಡಿದೆ
ಸಂಕ್ರಾಂತಿಯ ಶುಭೋದಯ
ಎದುರಾಗಲಿ ಸುಖದುಃಖ ಸಮವೆಂದು
ಸಕಲ ಪೀಡೆಗಳ ತೊಲಗಲು
ಎಳ್ಳು ಬೆಲ್ಲವ ತಿಂದು
ಸ್ವಾಗತವಿದೋ ಸಂಕ್ರಮಣಕ್ಕಿಂದು

Leave a Reply