ಸರ್ಕಾರಿ ಕೆಲಸ

ಸರ್ಕಾರಿ ಕೆಲಸ

ಸರ್ಕಾರಿ ಕೆಲಸದ ಕಿರಿಕಿರಿ
ಹೊಡಿಸತಾರ ಕಛೇರಿಗೆ ಗಿರಾಕಿ ಗಿರಿಗಿರಿ
ಸ್ವತಃಕ್ಕೆ ತಿಳಿಯರು ಒಂದೂ ನಿಯಮ
ಸಮಯಕ್ಕೆ ಸರಿಯಾಗಿ ಬರರು ಎಂದೂ  ಸಮ
ಏರತೈತಿ ಸದಾ ಇವರಿಗೆ ಪಿತ್ತ
ಸಮ ಇರುವುದಿಲ್ಲ ಎಂದೂ ಚಿತ್ತ
ಮೇಲಧಿಕಾರಿಗಳಿವರ ಕಾಲೆಳೆಯಲು
ಇವರಿನ್ನೊಬ್ಬರ ಕಾಲ್ಹಿಡಿಯುವರು
ಸರ್ವ ಶಿಕ್ಷಣ ಅಭಿಯಾನ ಇವರ ಗುರಿಯು
ನಲಿಕಲಿಗಾಗಿ ಜಾತವ ಮಾಡುತ
ಬೀದಿ ಮಕ್ಕಳಿಗಾಗಿ ಬೀದಿ ಹುಡುಕುತ
ಸಮಯವೇ ಇಲ್ಲ ಕಲಿಸಲು ಪಾಠ
ಶಿಕ್ಷಕರಿಗಂತೂ ಪರದಾಟ
ನೋಡುತ ಇವರ ಹುಚ್ಚಾಟ .

Leave a Reply