ಸಾಗಬೇಕು ಒಂದಾಗಿ

ಸಾಗಬೇಕು ಒಂದಾಗಿ
ಇರುಳ ನಕ್ಷತ್ರ ಮಿನುಗುತ ಮೂಡುವ ವೇಳೆ
ದೂರ ದೂರ ನಿನ್ನೊಡನೆ ಹೆಜ್ಜೆ ಹಾಕಬೇಕು
ಅಲೆಗಳು ಶಾಂತವಾಗಿ ದಂಡಿ ಗುಂಟ
ಬಡಿಯುವಾಗ ಕೈ ಹಿಡಿದು ನಿನ್ನ ಸಂಗ ಕೂಡಬೇಕು
ಬೆಳದಿಂಗಳ ರಾತ್ರಿಯಲಿ ಚೆಂಬೆಳಕಿನ ಕಲರವ
ಮೂಡುವವರೆಗೂನಿನ್ನಬಾಹುಬಂಧನದಲ್ಲಿರಬೇಕು
ದಟ್ಟ ಕಾನನದ ಹೂವಿನ ರಾಶಿಯಲ್ಲಿ
ಸಂಗಾತಿ ನಿನ್ನ ಬಳಿ ನಾ ಒಂದಾಗಿ ಸಾಗಬೇಕು.

ಉಮಾ ಭಾತಖಂಡೆ.

Leave a Reply