ಸಾಲ

ಸಾಲ

ಸಾಲದ ಜಾಡವ ಕಟ್ಟಿದರೊಮ್ಮೆ
ಬೆಳೆವುದು ದಿನೆದಿನೆ ದೊಡ್ಡ ದಿಮ್ಮೆ
ನಿರಂತರ ವರ್ಧಿಸುವುದಿದರ ಬಲಾಬಲ
ಮಾಡುವುದು ಸಾಲಿಗನ ದುರ್ಬಲ
ಮೇಯುವುದು ಮನವೆಂಬ ಹೊಲ
ಸುಟ್ಟು ಕರಕಾಗಿಸುವುದು ನೆತ್ತರ
ದೂಡುತಲಿ ಕ್ಷಣಕ್ಷಣಕೂ ಕತ್ತಲಿನೆಡೆ
ತೋಡುವುದು ಪಾತಾಳದಾಳದ ಕಂದಕಗಳ ಸಿಕ್ಕಿಸುವುದು ಆಳದಲಿ
ಹೊರ ಬರಲಿರದುಪಾತಾಳ ಗಂಗೆಯ
ಸಹಕಾರ
ಕಟ್ಟಿರಲು ಸಾಲವೆಂಬ ಕಗ್ಗಂಟಿನ ಜಾಲ
ಬರುವುದು ನಿಶ್ಚಿತ ದುರ್ಭರ ಕಾಲ.

Leave a Reply