ಸಾಹಿತಿ

ಸಾಹಿತಿ

ಭೂಮಿ ತಾಯಿಯೇ ಹಾಳೆ
ನೇಗಿಲವೇ ನಮ್ಮ ಲೇಖನಿ
ಸಮಾಜ ನೋಡಿ ಉತ್ತುತೇವಿ
ಭೂತ-ವರ್ತಮಾನ ಭವಿಷ್ಯತ್ಕಾಲಕೆ
ಹುಲುಸಾಗಿ ಬೆಳೆ ತೆಗಿತೇವಿ

ರೆಂಟೆಯೇ ಓದುವಿಕೆ
ಬಿತ್ತುವುದೇ ಬರವಣಿಗೆ
ಹರಗುವಿಕೆಯೇ ಕವಿತೆ
ಕಳೆಕೀಳುವಿಕೆ ವಿಮರ್ಶೆ

ತೆನೆಗಳೆ ಕಾದಂಬರಿ
ಕಣದ ರಾಶಿಯರ ಕಾವ್ಯ
ಹಂತಿಯೇ ಗಾಯನ
ತೂರುವಿಕೆಯೇ ಕವಿಗೋಷ್ಠಿ

ಎಡೆ ಹೊಡಿಯುವಿಕೆ ಮುನ್ನುಡಿ
ಹೊಡಿ ಹಿರಿಯುವಿಕೆಯೇ ಹೊತ್ತಿಗೆ
ಹಕ್ಕಿ ಹೊಂಡುವಿಕೆ ಪುಸ್ತಕ ಬಿಡುಗಡೆ
ರಾಶಿ ಮಾಡುವಿಕೆ ಮೊದಲ ಮುದ್ರಣ

ಭೂಮಿ ತಾಯಿಯೇ ಹಾಳೆ
ನೇಗಿಲವೇ ನಮ್ಮ ಲೇಖನಿ
ತಕ್ಕಡಿಯೇ ಅಕ್ಷರಗಳು
ಮೇರೆಯೇ ಅಧ್ಯಾಯ

Leave a Reply