ಸಿರಿವಂತ ಸಾಹಿತ್ಯ

ಸಿರಿವಂತ ಸಾಹಿತ್ಯ

ಕನ್ನಡ ಎಂಬುದು ಕನ್ನಡಿ ಹಾಗೆ
ಸ್ವಚ್ಛ ಶುಭ್ರ ನೇರ
ಕಲಿಯಲು ಇರದು ಕಷ್ಟ
ಬರವಣಿಗೆಯಲಿ ಸುಂದರ ಸ್ಪಷ್ಟ
ನುಡಿಯಲಿ ಸವಿಯ ಮಕರಂದ
ಓದಲು ಬೆಸೆವುದು ಬಂಧ
ಕೇಳಲು ಕಲ್ಪನಾ ಲೋಕವಿಹಾರ
ಮದಾಳದ ಒಳ್ನುಡಿಗೆ ಕನ್ನಡವೇ ಸರದಾರ.

ಇತ್ತೊಂದು ಸುಮಧುರ ಹೊತ್ತು
ಕನ್ನಡವೇ ಆಗಿತ್ತು ಕರುನಾಡ ಸ್ವತ್ತು
ಕೀರ್ತಿಪತಾಕೆಯ ಸಾರುವ ಹಲ್ಮಡಿಯ ಗತ್ತು
ಮೆರೆದಿದ್ದಾರಾ ಕವಿ ಕುಬ್ಜರು ಕನ್ನಡದಾಗಮ್ಮತ್ತು.
ಸಿರಿವಂತಿಕೆ ಇಂದು ಸಾಹಿತ್ಯಕೆ
ಬೇಂದ್ರೆ, ಕುವೆಂಪು, ಮಾಸ್ತಿ
ಮೆರೆದರು ಭವ್ಯತೆಯ ನಿಂದು
ಡಿ.ವಿ.ಜಿ. ಶಿವರುದ್ರಪ್ಪ, ಕಾರ್ನಾಡರು,
ಮಲ್ಲಿಗೆಯ ಸುಗಂಧ ಪಸರಿಸಿದರು
ನರಸಿಂಹ, ಲಕ್ಷ್ಮಣ, ಕಾಯ್ಕಿಣಿಯರು
ಸಾಹಿತ್ಯದ ಸಿಂಚನದ ಕಾರಂಜಿಗಳಿವರು.
ಶ್ರೀಮಂತವಿಂದು ಕರುನಾಡು ಸಾಹಿತ್ಯದಲ್ಲಿ
ನಿಮಿತ್ತವೇ ಸಂಭ್ರಮವು ಧಾರನಗರಿಯಲ್ಲಿ.

Leave a Reply