ಸೀರೆಯ ನೀರೆ

ಸೀರೆಯ ನೀರೆ

ಸೀರೆಯ ನೀರೆ ನನ್ನೊಡಲ
ಮಾತ ಹೇಳುವ ಕೇಳೆ
ಸಾಲದು ನೋಡೆ ಸಾವಿರ ಸೀರೆ
ಉಡುವಿಯಲ್ಲೆ ಥರಥರ ಸೀರೆ
ಲಗ್ನಕ್ಕೊಂದು ರೇಷ್ಮೆ ಅಂಚಿನ ಸೀರೆ
ಗಂಡನ ಜೊತೆಗಿರೆ ಗರಿಗರಿ ಇಳಕಲ್ ಸೀರೆ
ಕುಬುಸಕ್ಕೊಂದು ಅಂಚಿನ ಹತ್ತಿಯ ಸೀರೆ
ಮಕ್ಕಳ ಕೂಡಿರೆ ಕಸೂತಿ ಸೀರೆ
ಸಿನಿಮಾಕ್ಕೊಂದು ಥಳಕು ಬಳುಕಿನ ಸೀರೆ
ಜಾತ್ರೆಗೆ ಮತ್ತೇ ಜಾರ್ಜೆಟ್ ಸೀರೆ
ಗುಡಿ ಗೋಪುರಕೆ ಮೈಸೂರಸಿಲ್ಕ್
ಪ್ರವಾಸದಿ ಬೇಕು ಪ್ರಿಂಟೆಡ್ ಸೀರೆ
ನೇಗಿಲಯೋಗಿಯ ನೆಪದಲಿ ನೇಯ್ದ ಸೀರೆ
ಬಿಟ್ಟರೆ ಹೇಗೆ? ಖಾದಿ ಸೀರೆ
ಗಾಂಧಿಯ ನೆನಪಿಗೆ ಪಕ್ಕಾ ಖಾದಿ ಸೀರೆ
ಕಂಡೊಡನೊಂದು ಕೊಳ್ಳುವ ಮನಸು
ಬೇಕು ಬೇಕು ಬಗೆಬಗೆ ಸೀರೆ
ಕೂಡಿರಲು ಸಾವಿರ ಸಾವಿರ ಸೀರೆ
ಆದರೂ ಇಷ್ಟ ಪರರುಟ್ಟ ಸೀರೆ
ಏನೇ ಆಗಲಿ ಸೀರೆಯನುಟ್ಟ ನೀರೆ
ನೀನೇ ಬಲು ಸುಂದರೆ.

Leave a Reply