ಅದೇಕೋ ಗೊತ್ತಿಲ್ಲ

ಅದೇಕೋ ಗೊತ್ತಿಲ್ಲ
ನನ್ನ ಏಕಾಂಗಿ ತನದಲಿ
ನೀ ಜೊತೆಗಿರುವ ಹಾಗೆ!
ನಿದಿರೆ ಬಾರದಿರೆ ರಾತ್ರಿ
ನಿನ್ನ ನೆನಪಾದ ಹಾಗೆ!
ಎದೆಗೊದ್ದು ಬರುವ ಸಂಕಟಕೆ
ನಿನ್ನ ಹೆಗಲಿರುವ ಹಾಗೆ!
ಬಿಕ್ಕಳಿಸಿ ಬರುವ ಕಂಬನಿಗೆ
ಒರೆಸುವ ಹಸ್ತ ನಿನ್ನದಿರುವ ಹಾಗೆ!
ನಲುಗುವ ಹೃದಯಕೆ
ನಿಟ್ಟುಸಿರು ನಿನಾದ ಹಾಗೆ!
ಭಾರವಾದ ಮನಸ್ಸಿಗೆ
ನಿನ್ನ ತೊಡೆಯಲ್ಲಿ ಶಿರವಿಟ್ಟ ಹಾಗೆ!
ಭವಿಷ್ಯದ ಹಂಬಲಕೆ
ಸದಾ ನಿನ್ನ ಬೆಂಬಲವಿರುವ ಹಾಗೆ!
ಏಕೋ ಗೊತ್ತಿಲ್ಲ ಬಳಿ ಇಲ್ಲದಿದ್ದರೂ
ಸನಿಹ ಇದ್ದ ಹಾಗೆ!
ಏಕೋ ಗೊತ್ತಿಲ್ಲ!

ಉಮಾ ಭಾತಖಂಡೆ.

Leave a Reply