ಚಿಂತೆಯ ಸಂತೆ

ಚಿಂತೆಯ ಸಂತೆ

ಪೂಕ್ಕಿದೇನೊಂದು ಚಿಂತೆಯ ಸಂತೆಯೊಳ್
ಕಾಣಲಿಲ್ಲ ಪೆರಿಲ್ಗಳ್ವೊಂದು ಬಾನೊಳ್
ನುಸುಳಿ ನುಸುಳಿ ಸಂದಿಗುಂದಿಗಳಲ್ಲಿ ಹಗಲೊಳ್
ಭಾವನೆಯು ಇರುಳಂತೆ ಭಯದ ಅಂಧಕಾರದೊಳ್
ಮಾರುತಿದ್ದರೆಲ್ಲರ್ ಮೋಸ ವಂಚನೆಯ ಸೇರಿನೊಳ್
ಕಂಡ ಕಂಡಲ್ಲಿ ಹಿಂಸೆಯ ಮಾತಿನ ಚೀಲಗಳ ಪೊತ್ತು
ಸಾಗಿಸುತ್ತಿದ್ದರ್ ದುಃಖದ ಮೂಟೆಗಳ ಹೊತ್ತು
ರಾಶಿ ರಾಶಿ ನಂಬಿಕೆ ದ್ರೋಹದ ಸಾವರಿಸಿ ನೆಲದೊಳ್ಳ
ಅರಿವಿಗೆ ಬಾರದಂತೆ ನೇವರಿಸಿದ್ದರ್ ಮುತ್ತಿನೊಳ್
ವಿಷಜಂತುವಿನಂದದೀ ಹೆಡೆ ಬಿಚ್ಚುವುದು ಪ್ರೇಮದಲ್ಲಿ ಹಿಡಿದೊಳ್
ರುದ್ರನರ್ತನ ಅಮಾನವೀಯ ರಕ್ಕಸ ಮನುಜರೊಳ್
ಹಗೆ,ಧ್ವೇಷ,ಅತ್ಯಾಚಾರದ ಹೊಗೆ ಮುಚ್ಚಿಟ್ಟು ಪರದೆಯೊಳ್
ಅರಿಯದ ಭಿಕ್ಷುಕರು ಅಳಿದುಳಿದ ನಂಬುಗೆ ಪ್ರೇಮದ ಭಿಕ್ಷೆ ಬೇಡುತ್ತಿದ್ದರ್
ಒಲವ ತಿಳಿಯದ ತಿಳಿಗೆಡಿಗಳು ತಿರುವುತ್ತಿದ್ದರ್ ಕುಹಕದೊಳ್

Leave a Reply