ದೇವರಿಗೊಂದು  ಪತ್ರ (22)

ದೇವರಿಗೊಂದು  ಪತ್ರ (22)

ಹೇಗಿರುವೆಯೋ? ನಂದಾಗೋಪಾಲ ಮುಕುಂದ

ತಾಳಲಾರೆ ಇನ್ನು  ಅಗಲಿಕೆಯ ನೋವ ಗೋವಿಂದ

 

ಭಿನ್ನ ಭಿನ್ನ ರೂಪದೊಳು ಬಂದು ಕಾಣಬಾರದೆ ವಿಠಲ

ಕಂಡ ಕಂಡವರನ್ನೆಲ್ಲ ನೀನೆಂದೇ  ಭಾವಿಸಿ ಭ್ರಾಂತಳಾಗಿಹೆ

 

ಬಾ.. ಬಾರೋ..ಮುದ್ದು ಬಾಲನಂದನನಾಗಿ  ಒಮ್ಮೆ

ನಾ.. ಯಾಶೋದೆಯಾಗಿ ಮುದ್ದಾಡುವ ಬಯಕೆ

 

ಬಾ..ಬಾರೋ ಒಮ್ಮೆ ಕಳ್ಳ ಕೃಷ್ಣನಾಗಿ ಕುಂಟು ನೆಪದಲ್ಲಿ

ನಾ ಹುಸಿ ದೂರು ಹೇಳುವ ಸಖಿಯರ ಸಂಗವಿರುವೆ

 

ಬಾ..ಬಾರೋ ನೀ ಕೊಳಲ ನುಡಿಸುತ ಗೋಪಾಲಕನಾಗಿ

ನಾ.. ತಲ್ಲಿನಳಾಗಿ  ಓಡೋಡಿ ಬರುವೆ ನಿನ್ನ ಬಳಿ ಗೋವು ಆಗಿ

 

ಬಾ..ಬಾರೋ ವೇಣು ನುಡಿಸುತ್ತಾ ತಾವರೆ ಕೊಳದ ಬಳಿ

ನಾ…ನಿನ್ನ ಮಧುರ ಸೆಳೆತಕ್ಕೆ ಪ್ರೇಮ ಸಖಿಯಾಗಿ ಬರುವೆ

 

ಬಾ..ಬಾರೋ ಸಾರಥಿ ಸಾತ್ಯಕಿ ರೂಪದೊಳು ಮತ್ತೆ

ನಾ ನಿನ್ನ ಪಾದದಡಿ ಕುಳಿತು ಶಿಷ್ಯೆಯಾಗುವ  ಇಚ್ಛೆ

 

ಬಾ..ಬಾರೋ ವಿರಾಟ ಸ್ವರೂಪಿ ವಿಶ್ವನಾಥ!

ನಿನ್ನ ಚರಣಗಳ ಹಿಡಿದು ಪೂಜಿಸುವ ಬಯಕೆ

 

ನೀ ಬಲು ಮೋಹ ಮಾಯೆಯ ಸ್ವರೂಪ

ಅಡಿಗಡಿಗೂ ಸವಾಲು ಕೊಟ್ಟು ಮಂದಸ್ಮಿತ ನಾಗುವವ

 

ವಿಷಾದ ಕಂಡು ಬಲು ಮೋಜು ಮಾಡುವವ

ಮೋಜಿನಲ್ಲಿ ಗೋಜು ಇಳಿಸುವವ

 

ಬದುಕಿನ ಸರಿ ತಪ್ಪುಗಳ ಬೋಧಿಸುವ ಶಿಕ್ಷಕ

ನಂಬಿದವರ ಕೈಬಿಡದೆ ಸಲಹುವ ಜನಕ

 

ನಿನ್ನಡಿಯಲ್ಲಿ ಪಾದರವಿಂದಗಳಲ್ಲಿ ಶಿರವಿಟ್ಟು

ಹೊರಳಾಡಿ ತಣಿಯಬೇಕಿದೆ ತಿಳಿಸು ಉತ್ತರ ಕೊಟ್ಟು

 

ಇಂತಿ

ನಿನ್ನ ಉಮಾ ಭಾತಖಂಡೆ.

Leave a Reply