ದೇವರಿಗೊಂದು ಪತ್ರ! (3)

ದೇವರಿಗೊಂದು ಪತ್ರ! (3)
ಓ..ನಂದನ! ನಿನಗೊಂದು ಮಾತು
ನಾನಂತು ಬಾಹ್ಯ ದೇಹಕ್ಕೆ ಸುಣ್ಣಬಣ್ಣ ಬಳಿವುದ ಬಿಟ್ಟೆ
ಸದಾ ನಿನ್ನ ಸ್ಮರಣೆಗೆ ನನ್ನಾತ್ಮದ ಕಸ ಗುಡಿಸಿ
ಕಟ್ಟಿದ ಜಾಡನೆಲ್ಲಾ ತೆಗೆದು ಹೊರ ಹಾಕಿದ್ದೇನೆ
ನಿನ್ನ ನೆನೆನೆನೆದು ಅಂತರಾತ್ಮವ ತೊಳೆಯುತಿದ್ದೇನೆ
ಅಣಿಗೊಳಿಸುತ್ತಿರುವೆ ಹೃದಯದ ಬಾಗಿಲ ರಂಗೋಲಿಯಲಿ
ಉಸಿರೆಂಬ ಹೊಸ್ತಿಲಿಗೆ ನಿನ್ನ ನಾಮದ ತೋರಣ ಕಟ್ಟುತಿರುವೆ
ಕಣ್ಣೀರ ಭಾಷ್ಪ ತುಂಬಿಟ್ಟಿರುವೆ ನಿನ್ನ ಪಾದ ತೊಳೆಯಲು
ಬುದ್ಧಿ ಭ್ರಮಣೆಯೆಂದರುಹ ಬೇಡ ವಾಸುದೇವಾ!
ನನ್ನೆರಡು ಪತ್ರಕ್ಕೆ ನೀ ಪ್ರತ್ಯುತ್ತರ ನೀಡಲಿಲ್ಲ…
ಆದರೇನಂತೆ ನಿನ್ನುತ್ತರ ಬರುವವರೆಗೂ ನಾ
ಪತ್ರ ಕಳಿಸುವುದ ಮರೆಯಲಾರೆ ತಿಳಿಯೆ ನೀ
ಬರುವುದೆಂತು ತಿಳಿಸು ನಾ ಕಾಯುತ್ತಿರುವೆ

ಉಮಾ ಭಾತಖಂಡೆ.

Leave a Reply