ದೇವರಿಗೊಂದು ಪತ್ರ(4)

ದೇವರಿಗೊಂದು ಪತ್ರ(4)
ಬಂದೆನಂದು ನಿನ್ನ ಮೂರುತಿ ನೋಡಲೆಂದು
ಕಾಣೆನೇಕೋ ಮುಖದಲಿ ಮಂದಹಾಸ ಅಂದು
ವಿಚಲಿತಳಾದೆ ಕೆಡಕೇನು ಮಾಡಿಹೆನೆಂದು
ದೃಷ್ಟಿ ಬದಲಿಸಿ ಮತ್ತೆ ಮತ್ತೆ ನೋಡಿದೆನಂದು ಕ್ಷಣಕೆ ಮಿಂಚಂತೆ ಉರುಳಿತು ಭಾಷ್ಪವೊಂದು
ಅರಿಯದಾದೆ ಆ ಗಂಭೀರ ಭಾವ ಅಂದೇಕೆಂದು
ಕಾದೆ ಘಳಿಗೆ ಮಂದಸ್ಮಿತ ಮೂಡುವುದೆಂದು
ಭಕ್ತಸ್ತೋಮ ತುಂಬಿರಲು ಎಳ್ಳು ಬೆಲ್ಲವತಂದು
ಸಕಲರನು ಹರಸುತ ದಣಿವಾಗಿರ ಬಹುದೆಂದು
ಏನೋ ಸಂತಸ ತುಂಬಿ ಬಂದಿದ್ದೆ ನಾನಂದು
ಅರಿವಿದ್ದರೂ ನೀ ಬಯಸಿದಂತೆ ಆಗುವುದೆಂದು
ಅರುಹಲು ಬಂದೆ ಅನ್ನಿಸಿದ ಮಾತನೊಂದು
ಮುಖ ಭಾವವೇ ಹೇಳಿತು ಒಳಿತಾವುದೆಂದು
ವಸುದೇವ ನಡೆವೆ ನಿನ್ನಿಚ್ಛೆಯಂತೆ ಎಂದೆಂದೂ
ಬಯಸಲಾರೆ ಅನ್ಯವನು ಇನ್ನೆಂದೆಂದು
ಅದಕಾಗಿ ಬರೆದೆ ನಿನಗಾಗಿ ಪತ್ರವನೊಂದು!
ನನಗೂ ಇಚ್ಛೆ ನಿನ್ನ ಉತ್ತರದ ಪತ್ರ ಓದಲಿಂದು
ಕಾಯುವೆ ಪ್ರತ್ಯುತ್ತರ ಬರುವುದೆಂದು.

ಉಮಾ ಭಾತಖಂಡೆ.

Leave a Reply