ದೇವರಿಗೊಂದು ಪತ್ರ- (8)

ದೇವರಿಗೊಂದು ಪತ್ರ- (8)

ಅದೆಂಥಾ..ಚತುರನಯ್ಯ ನೀ ದೇವಕಿ ತನಯ
ಪ್ರತ್ಯುತ್ತರ ನೀಡೆನಲು…ಮರೆತಂತೆ ನಟಿಸುವೆಯ
ದರುಶನ ಕೊಡೋ ತಂದೆ ಎನಲು ಕನಸಲ್ಲಿ ಬರುವೆಯಾ?
ಎಂಥಾ.. ಚತುರ ಮತಿಯವನಯ್ಯ..ನೀನು

ನಿನ್ನಂಥ ನಿರ್ದೇಶಕನ ನಾ ಕಂಡಿರಲಿಲ್ಲವೋ..
ಯುಕ್ತಿಯಿಂದಲಿ ಪಾತ್ರ ಕೊಟ್ಟು ಕಳಿಸಿಹೆ ಸಲಹೋ
ಕರ್ಮಗಳಿಗನುಸಾರ ತಕ್ಕುದಿದೆಂದು ಉಣ್ಣು ನಿನ್ನ ಪಾಲಿನದೆಂದು ಎಲವೋ
ಎಂಥಾ.. ಚತುರ ಮತಿಯವನಯ್ಯ ನೀನು

ಬೇಡಿಕೆ ಮುಂದಿಡಲು ಸುಜನರ ಕಳಿಸುವೆ
ದುಃಖದಿಂದ ನೆನಹಲು ಬಳಿಸಾಗಿ ನಿಲ್ಲುವೆ
ವಿವೇಚನೆ ನೀಡುತ ವಿಮುಕ್ತಿ ನೀಡುವೆ
ಎಂಥಾ… ಚತುರಮತಿಯವನಯ್ಯ ನೀನು

ಒಂದ್ಹೊತ್ತು ಉಣದಿರೆ ಉದರ ಸಹಿಸುತ್ತಿರಲಿಲ್ಲ
ನಿನ್ನುತ್ತರಕ್ಕೆ ಕಾಯುತ್ತ ನಿತ್ಯ ಹಸಿವೆಯಾಗುತ್ತಿಲ್ಲ
ಆದರೂ ಮುಖ ಬಾಡಿ ಕಾಂತಿಹೀನಳಾಗಿಲ್ಲ
ಎಂಥಾ.. ಚತುರಮತಿಯವನಯ್ಯ ನೀನು

ನಿನ್ನ ಹೆಸರಿನ ಪತ್ರವೆಂದರೆ ನಿಂದಿಸುತಿಹರಯ್ಯ
ಮೆಚ್ಚುವವರ ನೋಡಿ ಆಡಿಕೊಳ್ಳುತಿಹರಯ್ಯ
ಮಾತಿಗೆ ಮರುಳಾಗಿ ಪತ್ರ ಕಳಿಸದಿರೆನಯ್ಯ
ಸಮಚಿತ್ತ ನೀಡಿ ಎನ್ನ ಪೊರೆಯಯ್ಯಾ

ಪ್ರತ್ಯುತ್ತ ನೀಡುವುದ ಮರೆಯದಿರಯ್ಯಾ
ಎಂಥಾ.. ಚತುರ ಮತಿಯವನಯ್ಯ ನೀನು
ಓ..ಜಗದೊಡೆಯ ಎಂಥಾ… ಚತುರಮತಿಯವನಯ್ಯ ನೀನು.

ಇಂತಿ
ಉಮಾ ಭಾತಖಂಡೆ.

Leave a Reply