ದೇವರಿಗೊಂದು ಪತ್ರ! -1

ದೇವರಿಗೊಂದು ಪತ್ರ!
ಸೌಖ್ಯವೇ ದೇವರೇ?

ನನಗೊತ್ತು ನೀನೆಷ್ಟು ನನಗಾಗಿ ಕಳವಳಗೊಳ್ಳುತ್ತಿರುವಿ
ನಿನ್ನ ನಾ ದಿನವೂ ಸ್ಮರಿಸಲೆoದೇ ನನಗೆ ಸಂಕಟ ಕೊಡುತಿರುವಿ!

ಸಿರಿಗಾಗಿ ಹಂಬಲಿಸುವವರ ಸಿರಿವಂತರಾಗಿಸಿ ಅವರ ಮರೆತು ಬಿಟ್ಟೀ
ಕೆಲವರ ಕಲ್ಲು ಹೃದಯ ಮಾಡಿ ಕಡೆಗಣಿಸಿ ತಳ್ಳಿಬಿಟ್ಟೀ

ನಿನ್ನ ಪಡೆಯಲೇ ಬೇಕೆಂದು ಬಯಸಿ ತಪಗೈದವರ ಸಂತರ ಮಾಡಿ ಬಿಟ್ಟೀ
ನಿನ್ನಲ್ಲಿ ಅಪನಂಬಿಕೆ ತೋರಿ ಪರೀಕ್ಷೆ ಮಾಡುವವರ ಅಲೆಮಾರಿಯಾಗಿಸಿ ಬಿಟ್ಟೀ

ಎನಗೆ ಮಾತ್ರ ಮೃದು ಮನವ ಕೊಟ್ಟು
ಕಠೋರ ಕಷ್ಟಗಳ ಸಂಕೋಲೆಯೊಳು ಸಿಕ್ಕಿಸಿ
ಕೃಷ್ಣ ಕೃಷ್ಣ ಎಂದು ಹಲಬುವಂತೆ ಮಾಡಿದಿ
ಹಸನಾದ ದೋಣಿಯೊಳು ನೀನೇ ಕೂಡಿಸಿದಿ

ನಡುನಡುವೆ ಪ್ರವಾಹದ ಭಯದಲಿ ನಿನ್ನ ನಾಮ ನಾಲಿಗೆಯಲಿ ನುಡಿಸಿದಿ
ಬದುಕ ಬಂಡಿ ಸಾಕೆನಿಸಿ ದರುಶನಕೆ ಬಂದಾಗ ಮುಗುಳ್ನಕ್ಕು ಗೆದ್ಡಿ

ನಾ ನಿನಗಾಗಿ ಪರಿತಪಿಸ ಬೇಕು! ನಿನ್ನ ಕಾಣಲು ಬರಬೇಕು ಎಂಬ ನಿನ್ನ ಜಾಲವಿದು
ಅರಿತೆ ನಿನ್ನ ಮಹಿಮೆ, ನೀ ಕೊಡುವ ಕಷ್ಟ ನಿನ್ನ ಪ್ರಿಯರಿಗೆಂದು

ನಾನೀಗ ನಿನ್ನ ದಾಸಿಯಾಗಿರಲು ಸಂತಸವಾಯಿತು ನಿನಗೆ
ಅರ್ಥವಾಗದೆ ನಿನ್ನ ಪ್ರೀತಿ ತಡವಾಯಾಯಿತು ಕ್ಷಮೆ ಇರಲಿ ನನಗೆ!

ಸಲ್ಲದ ಮರುಕ,ಸಲ್ಲದ ಸಂಪತ್ತು,ಸಲ್ಲದ ಈ ಮಾಯ ಲೋಕ, ನೀ ಸಾಕು ಎನಗೆ
ನೀನೆಂದು ಬರುವೆ ಪ್ರತ್ಯುತ್ತರ ನೀಡಿ ಸಹಕರಿಸು ಈ ಪತ್ರಕೆ.

ಉಮಾ ಭಾತಖಂಡೆ.

Leave a Reply