ಅರಳು ಕುಸುಮಗಳಿಗೆ ಇಂದು
ಮುದುಡಿಕೊಳುವ ಸಮಯ ಬಂತು
ಮೈಯ ಬೆವರು ತರಿಸಿ
ಧೀರ್ಘ ಉಸಿರು ಬಿಡುವ ಪರಿಯ ಕಂಡೆನು
ವರ್ಷವಿಡೀ ಗ್ರಹಿಸಿದೆಲ್ಲವನ್ನೂ
ಎರಡೇ ಗಂಟೆಯಲ್ಲಿ ಉರುಹಬೇಕು
ಎದೆಯ ಬಡಿತವೇರಿಸಿ
ಕಣ್ಣು ಒಂದೇ ಸಮನೆ ಬಡಿದು
ಮೇಲೆ ಕೆಳಗೆ ನೋಡುತಿದ್ದು
ತಿಳಿಯದಕ್ಕೆ ಚಿಂತೆ ಮಾಡಿ
ಅರಿತಿದ್ದನ್ನು ಬಿಟ್ಟು ಕೊಟ್ಟು
ಒಂದೇ ಒಂದು ಹಾಳೆಯಿಂದ ಮಗುವ
ಅಳತೆಗೋಲಿನಿಂದ ತೂಕ ಮಾಡಿ
ಇಗೋ ಸಿದ್ದವಸ್ತುವಿದೆಂದು ಗ್ರಹಿಸಿ
ಅಸಿದ್ದ ವಸ್ತುವಿಗೊಂದು ಮುದ್ರೆಕೊಡುವ ಪರಿಯ
ಏಕೆ? ಇಂಥ ಜಾಣತನದ ಪರೀಕ್ಷೆ
ಅರಳುತಿರುವ ಚಿಗುರಿನಿಂದ ಇದೆಂಥ ಪರೀಕ್ಷೆ!
– ಉಮಾ ಭಾತಖಂಡೆ
You must log in to post a comment.