ಎಲ್ಲೋ ಕಳೆದು ಹೋಗಿರುವೆ,
ಎಲ್ಲೋ ಕಳೆದು ಹೋಗಿರುವೆ
ಕ್ಷಣ ಕ್ಷಣವೂ ಬೆನ್ನಟ್ಟಿ ಬರುವ ನೋವುಗಳ ತಡೆದು
ಉಕ್ಕುಕ್ಕಿ ಬರುವ ಕಂಬನಿಯ ಬಿಗಿದು ಕಟ್ಟಿ
ದಿನದಿನವೂ ಬರುವ ಸವಾಲುಗಳಿಗೆ ಎದೆಯೊಡ್ಡಿ
ಪ್ರತಿ ಪಾತ್ರರಲಿ ಎಲ್ಲ ಉಸುರಿ ಹಗುರಾಗಿಸಿ ತನುವ
ಮತ್ತೂ ನಕ್ಕು ನಲಿದು ಬಂದದ್ದು ಬರಲಿ ಎಂದರೂ
ಒಂಟಿಯಾಗಿರುವಾಗ ಏಕೋ ಎಲ್ಲೋ ಕಳೆದು ಹೋಗುವೆ
ಅರಿವಿಲ್ಲದೆ ಏಕಾಂಗಿ ಎನಿಸಿ ಸಲ್ಲದ ಬಂಧಗಳಿಗಾಗಿ
ಇಲ್ಲದ ಅನುರಾಗಕ್ಕಾಗಿ ಮೂರ್ಖಳಾದಂತೆ ಮೋಹದಲ್ಲಿ
ನನ್ನೇ ನಾ ಹುಡುಕುತ್ತಾ ಸತ್ಯ ಮಿಥ್ಯಗಳ ಗೊಂದಲದಲ್ಲಿ
ಮತ್ತೆ ಮತ್ತೆ ಏಕೋ ಎಲ್ಲೋ ಕಳೆದು ಹೋಗುವೆ
ಉಮಾ ಭಾತಖಂಡೆ
You must log in to post a comment.