ಗುರು

ಗುರು ನೀ ಪ್ರೇಮ ಕರುಣೆಯ ಸಾಗರ
ನಂಬಿಕೆ, ಪ್ರೀತಿ, ವಿಶ್ವಾಸ ತೋರಿದಲ್ಲಿ ನೀ ಅಮರ
ಕೊಡುವುದಾದರೆ ಶಿಷ್ಯನಿಗೆ ಸಹಕಾರ
ಕೈಗೆಟುಕುವುದು ಉತ್ತುಂಗದ ಶಿಖರ

ಸಾಕು ಅರಳಿಸಿದರೆ ಕೋಮಲ ಸುಪ್ತ ಪ್ರತಿಭೆಯ
ತೋರು ನೀ ಬರಿಯ ಗುರುತಿಸುವ ದಾರಿಯ
ಬೇಡ ಕೈಹಿಡಿದು ನಡೆಸುವ
ಬಿಡು ಮುಟ್ಟಲು ಜ್ಞಾನವೆಂಬ ಶಿಖರ ಸಾಗರ

ಎಡರು ತೊಡರುಗಳ ತೀಡಿ ಹಾಕು ಭವಿಷ್ಯಕ್ಕೆ ಬುನಾದಿ
ಆಗದಿರಲಿ ಶಿಶು ಕೂಚುಬಟ್ಟ ಓದಿ ಓದಿ
ಮಾಡು ಭವಿಷ್ಯದ ನಾಯಕ
ನೀನಾಗು ಮೌಲ್ಯ ತಿಳಿಸುವ ಸಮರ್ಥಕ

ತಿಳಿಯದಿರೆ ಹಿರಿದು ಸಂಪಾದನೆ
ಸಿಗುವುದು ಅದರಲ್ಲಿ ಸಾವಿರ ಆಪಾದನೆ
ಸಿಕ್ಕಿದ್ದಾದರೆ ಗುರುವಿಗೊಂದು ನಮನ
ಅದಾಗುವುದು ಗುರು ನಿನಗೆ ಸುದಿನ

ಉಮಾ ಭಾತಖಂಡೆ

132

1 Comment

  1. ನಮ್ಮನ್ನು ತಿದ್ದಿ, ತೀಡಿ ಒಳ್ಳೆಯ ಮನುಷ್ಯರನ್ನಾಗಿ ಮಾಡಿದ ನಮ್ಮ ಗುರುಗಳಿಗೆ ನಮನ…

Leave a Reply