ಹೊಸ ಗೆಳೆತನ ಶುರುವಾದಾಗ,
ಹೀಗೊಂದು ಗೆಳೆತನ ಜಗಳದಿಂದ ಆದಿಯಾಗಿ
ಬೆಣ್ಣೆ ಬಿಸ್ಕೆಟ್ ತಿಂದು ಕೂಡಾಡಿ ಅಂತ್ಯವಾಯ್ತು
ಅದು ಬಾಲ್ಯದ ಮುಗ್ಧ ಹೃದಯಗಳ ಪ್ರೀತಿಯಾಗಿತು
ಕೂಡಿ ಓದಿ ಆಡಿ ಪಾಡಿ ಒಟ್ಟಿಗೆ ಹೋಗಿ ಬಂದು
ಒಟ್ಟಾಗಿ ಸೇರಿ ಮಲಗಿ ನಕ್ಕು ನಲಿದು
ಒಂದೇ ಥರದ ಬಟ್ಟೆ ತೊಟ್ಟು ಬೆಸೆದಿತ್ತು
ಪ್ರೌಡಾವಸ್ಥೆಯ ಹುರುಪಿನ ಮಧುರ ಸ್ನೇಹ
ಕ್ಯಾಂಟಿನ್ನಲ್ಲಿ ಗಿರ್ಮಿಟ ತಿಂದು ಚಹ ಕುಡಿದು
ಕಲ್ಪನೆಯ ಸವಿ ಕನಸುಗಳ ಕಟ್ಟಿ ಕೈ ಕೈ ಹಿಡಿದು
ಅನುರಾಗ ಚಿಗುರಿಸಿದ ಹರೆಯದ ಮತ್ತೊಂದು
ಗೆಳೆತನ
ಹೆಜ್ಜೆ ಹೆಜ್ಜೆಗೂ ಇರುವಿಕೆಯ ಭರವಸೆಯಲಿ
ಆದಿಯೂ ಅಲ್ಲದ ಅಂತ್ಯವೂ ಅಲ್ಲದ
ಮಂಧ್ಯಂತರದಲಿ ಉದಯಿಸಿದ ಚಿರಕಾಲ
ಉಳಿಯುವ ಆಪ್ತ ಗೆಳೆತನ ನಿಜ ಗೆಳೆತನ
ಎಲ್ಲವೂ ಸವಿ ನೆನಪುಗಳ ಹೂರಣ
ಉಮಾ ಭಾತಖಂಡೆ
You must log in to post a comment.