ಮನದಾಗಿನ ಗದ್ದಲ
ಎದಿಯೊಳಗ ಇದೇನ ಗದ್ದಲ ಎಬ್ಬಿಸಿ
ಕದ್ದು ನೋಡತೀ ಕದ್ದು ಮಾತಾಡತೀ
ಹೇಳಾಕ ಕೇಳಾಕ ಆಗದ ಅಂಜತಿ
ಇದೇನ ನನ್ನೊಳಗ ಗದ್ದಲ ಎಬ್ಬಿಸಿ!
ಒಬ್ಬವ ಕೂತು ಚಿತ್ರಪಟ ನೋಡತಿ
ನೆನಪ ಮಾಡಕೊಂಡು ಹಳೇ ಸಿನೆಮಾ ಹಾಡ ಹೇಳತಿ
ನಕ್ಕರೆ ಸಾಕು ಜಗತ್ತು ಗೆಲ್ಲತೀನನ್ನತಿ
ಇದೇನ ಗದ್ದಲ ಎಬ್ಬಿಸಿ
ಮನಸ್ಸಿನ ಎಲ್ಲಾ ಭಾಷಾ ತಿಳಕೋತಿ
ಕಣ್ಣಾಗ ಆಂಜಬ್ಯಾಡ ನಾ ಇದ್ದೀನಿ ಅನ್ನತಿ
ಮಾರಿ ಇಳಿತಂದ್ರ ತ್ರಾಸ ನೀ ಪಡತಿ
ಇದೇನ ಗದ್ದಲ ಎಬ್ಬಿಸಿ
ಮನದಾಗ ಪ್ರೀತಿ ಚಿಗರಸತಿ
ಬಿಡಲೊಲ್ಲೇ ಹಿಡಿಯಲೊಲ್ಲೇ ಅಗೈತಿ
ಹೃದಯ ಹೊಸ ಹಾಡ ಹಾಡೈತಿ
ಇದೇನ ಗದ್ದಲ ಎಬ್ಬಿಸಿ
ತೊಡಿ ಮ್ಯಾಲ ಬಿಳಿ ತಾವರಿ ಇಡತಿ
ಎದಿಯೊಳಗ ಕೆಂಡ ಸಂಪಿಗೆ ಬೇಕೆನ್ನುತಿ
ಯಾಕ ಸುಮ್ಮನ ಗದ್ದಲದಾಗ ಬೀಳತಿ
ಇದೇನ ಗದ್ದಲ ಎಬ್ಬಿಸಿ
ಇದೇನ ಗದ್ದಲ ಎಬ್ಬಿಸಿ.
ಉಮಾ ಭಾತಖಂಡೆ.
You must log in to post a comment.