ಮೋಡದೊಳಗೆ ಚಲಿಸುವಾಸೆ

ಮೋಡದೊಳಗೆ ಚಲಿಸುವಾಸೆ

ಓ ಅಂಬರದ ಮೋಡಗಳೇ ನಿಲ್ಲುವಿರಾ
ನಾ ಬರುವೆ ನಿಮ್ಮ ಜೊತೆ
ದೂರದಿ ಕಾಣುವ ಕುದುರೆಯೇ?
ಬೆಳ್ಳಂ ಬೆಳಕಿನ ಕಾಮಧೇನುವೇ?
ಗೊಂಬೆಗಳಂತೆ ರಥಗಳಂತೆ
ನಿಲ್ಲದೆ ಓಡುವ ಓ ಮೋಡಗಳೇ
ಏರಿ ಏರಿ ಮೇಲೇರಿ ನಿಮ್ಮಯ ಜೊತೆಗೂಡಿ
ಸವಾರಿಯ ಮಾಡಿ ಸುಖ ಪ್ರಯಾಣದಲಿ
ಎಲ್ಲವ ತೊರೆದು ಎಲ್ಲರ ತೊರೆದು
ಸಾಗುವ ನಾವು ಜೊತೆಗೂಡಿಬಿಳಿ ಮೋಡದಲಿ ನಾ ರಾಣಿಯಾಗಿ ಕರಿ ಮೋಡದೊಳ್ ಗಜಗಮನೆಯಾಗಿ
ಚಲಿಸುವೆ ನಿಮ್ಮೊಡನೆ ಚಲಿಸುವೆ ಓ ಮೋಡಗಳೇ.

Uma bhatkhande

Leave a Reply