ನಮ್ಮ ಕನಸ್ಸು

ನಮ್ಮ ಕನಸ್ಸು

ಒಡಲು ತುಂಬಿ

ಮೂರರಲ್ಲಿ

ಸಂತೋಷ ಹೊಮ್ಮಿ

ಮನಗಳಲ್ಲಿ

ಚಿಗುರಿದೆ ಹೊಸ ಕನಸ್ಸುಗಳು !

ಇನಿಯನ ನೆನಪು

ಎದೆಯ ತುಂಬ

ಬಯಸಿದೆ ಸನಿಹ

ಅನುಕ್ಷಣ

ಬಣ್ಣ ಬಣ್ಣದ ಚಿತ್ತಾರಗಳು !

ಮಳೆಯ ಹನಿ ಹನಿಯಲ್ಲೂ

ನಲ್ಲನ ಸವಿ ತಂಪು

ಕುಹೂ ಕುಹೂ ಕೂಗಿನಲ್ಲೂ

ಅವನ ಗುಣುಗು

ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು !

ಘರ್ಬದಿ ಆಡುವ

ನವಜಾತಕೆ

ಮೈಯೆಲ್ಲಾ ರೋಮಾಂಚನ

ಅದರ ಒಳ ಜಿಗಿದಾಟಕೆ

ಅವರಂತೆ ಅವನೋ.. ? ನನ್ನಂತೆಯೇ ಅವಳೋ !

ಮಾಸಗಳು ಕಳೆಯುತ್ತ..

ಇಂದಿಗಿಂದು ಒಂಬತ್ತು…

ಘರಬದಿ ಮೊಳಗಿದ ಮೇಳ

ಕೈಗಳಲಿ ಕುಣಿಯುವ ಹೊತ್ತು

ಆರತಿಯೂ ಸರಿಯೇ, ಕೀರತಿಯೂ ಸರಿಯೇ !

ಹರುಷದಿ ಕಾಣುವ

ಜಗವೆಲ್ಲಾ ಹಸಿರು

ಬೆರಳಂಚಿನ ಎಣಿಕೆ

ಆಗಮನಕ್ಕೆ ಕಾಯುತ್ತಿರುವೆ

ಎನ್ನ ತೋಳಲಿ ನಗುವ ಕಂದನಿಗೆ !

Leave a Reply