ನೀನಲ್ಲದೆ ಮತ್ತಾರು!

ನೀನಲ್ಲದೆ ಮತ್ತಾರು!

ಹರೋ ರಾತ್ರಿ ನಿದ್ದೆ ಗೆಡಿಸಿದವ
ಕನಸಲ್ಲಿ ಬಂದು ಕಾಡುವವ
ಕಲ್ಪನೆಯಲ್ಲಿ ಭ್ರಮೆ ಹಿಡಿಸಿದವ
ನೀನಲ್ಲದೆ ಮತ್ತಾರು?

ಪ್ರೀತಿ ಪ್ರೇಮದ ಪಾಠ ಕಲಿಸಿದವ
ಪ್ರೇಮದ ಮತ್ತೇರಿಸಿದವ
ಬಾಡಿದ ಮೊಗದಲ್ಲಿ ನಗೆ ಚಿಮ್ಮಿಸಿದವ
ನೀನಲ್ಲದೆ ಮತ್ತಾರು?

ಬಾಳಿಗೆ ಹೊಸಬೆಳಕು ನೀಡಿದವ
ಚಿಂತೆಯ ಮನಸಿಗೆ ಶಾಂತಿ ತಂದವ
ಕೈಬಿಡದೆ ಬೆನ್ನಿಗೆ ಬೆನ್ನಾಗಿ ನಿಂತವ
ನೀನಲ್ಲದೆ ಮತ್ತಾರು?

 

ಉಮಾ ಭಾತಖಂಡೆ.

Leave a Reply