ನಿಮ್ಮಿಬ್ಬರ ಪ್ರೀತಿ ಎಷ್ಟು ಶ್ರೇಷ್ಠವಾದದ್ದು

ನಿಮ್ಮಿಬ್ಬರ ಪ್ರೀತಿ ಎಷ್ಟು ಶ್ರೇಷ್ಠವಾದದ್ದು

ಕಡಲ ಆಳದ ಕಪ್ಪೆಚಿಪ್ಪಿನಲಿ ಅವಿತಿರುವ
ಸ್ಪರ್ಶವೆ ಅರಿಯದ ಶುಭ್ರ ಮುತ್ತು
ನಮ್ಮಿಬ್ಬರ ಪ್ರೀತಿ

ಅಂಬರದ ತುಂಬೆಲ್ಲಾ ತಾರೆಗಲಿದ್ದರೂ!
ಸದಾ ಫಳ ಫಳನೇ ಹೊಳೆವ ದ್ರುವತಾರೆ
ನಮ್ಮಿಬ್ಬರ ಪ್ರೀತಿ

ಸೋನೆ ಸುರಿದೊಡನೆ ಮೊಗ್ಗೊoದು ಮೆಲ್ಲನೆ ಅರಳಿ
ಸೂಸಿದ ನವ ಪರಿಮಳದಂತೆ
ನಮ್ಮಿಬ್ಬರ ಪ್ರೀತಿ

ಲಲನೆಯಲಿ ಬಳುಕಿ ನರ್ತಿಸುತ್ತಾ ಹರಿದು
ವಿಶಾಲ ತಟದಲ್ಲಿ ತಿಳಿಯಾದ ಕನ್ನಡಿ
ನಮ್ಮಿಬರ ಪ್ರೀತಿ

ಮಾಗಿಯ ಚಳಿಯಲ್ಲಿ ಮುಸುಕಿದ ಇಬ್ಬನಿ
ಕರಗಿ ಎಳೆಯ ಎಲೆಯಿಂದ ಉರುಳಿದ ಮುತ್ತಂತೆ
ನಮ್ಮಿಬ್ಬರ ಪ್ರೀತಿ

ಉಮಾ ಭಾತಖಂಡೆ

Leave a Reply