ಸಂಬಂಧ

ನಲ್ಲಾ
ಹೌದಲ್ಲಾ
ಈ ನಡುವೆ
ನಿನ್ನ ಮೇಲೆ
ಕಡಿಮೆಯಾಗಿದೆ
ಎನ್ನ ಆಸಕ್ತಿ
ಹೆಚ್ಚಾಗಿದೆ
ವಿರಕ್ತಿ


ಆ ನಿನ್ನ ಸ್ಪರ್ಷದಿ
ಮೈಯಲಿ ಮುಳ್ಳು
ಚುಂಬನವೋ
ನಿನ್ನ ದೂಡಿ
ದೂರ ತಳ್ಳೋ ಬಯಕೆ
ಈ ಮನಕೆ
ನಿನ್ನ ಸಾನಿಧ್ಯವೇ
ಬೇಡದು
ನಿನ್ನ ನೆನಪೂ
ಕೂಡ ಕಾಡದು
ಇದೆಂತ ಬದಲಾವಣೆ ನಲ್ಲ
ಮೊನ್ನೆ ಮೊನ್ನೆಯವರೆಗೂ
ನಿನ್ನೆದೆಯಲಿ
ಮನ ಹುದಿಗೆ
ಅದೆಂತ ಸುಖ
ನಿನ್ನಪ್ಪಿಗೆ
ಅದೇನು ಹಿತ!
ಇದ್ದಕ್ಕಿದ್ದಂತೆ
ಇದೇನಾಯಿತು ನಲ್ಲ
ನನ್ನ ನಿನ್ನ ನಡುವೆ?
ಯಾರದಾರೂ ದೃಷ್ಟಿ
ತಾಕಿತೇ?
ಮಾಟ ಮಾಡಿಸಿದರೆ?
ಅದೆಂತು ಅಲ್ಲ
ಈ ಧಗ ಧಗ ಬೇಸಿಗೆ
ಬೇಡವಾಗಿದೆ
ನನ್ನ ಹೊದಿಕೆ!

Leave a Reply