ಶ್ರಾವಣದಾಗಮನ

ಇಳೆಯು ಬಿಸಿಯ ಮುಕ್ತಿಪಡೆದು
ನಭದಿ ಧರೆಗೆ ಜಲಧಾರೆ ಸುರಿದು
ಕಾನನದಿ ಧರೆ ಹಸಿರು ಸೀರೆಯುಟ್ಟು
ಗಿಡಮರಗಳ ಚಿಗುರ ಬಸಿರು ಮೊಳಕೆಯೊಡೆದು
ಹಳ್ಳ ಕೊಳ್ಳ ಕೆರೆ ಕಾಲುವೆ ಮೈತುಂಬಿ
ನದಿಯು ಬಿಂಕದಿಂದ ಬೀಗಿ
ಹಾಲ ಹಳ್ಳದಂತೆ ಜಲಪಾತದ ರುದ್ರನರ್ತನ
ಸಾಟಿ ಯಾರಿಗೆ? ಈ ಅನಂತ ದಿವ್ಯ ದರ್ಶನ
ಹಸನು ಕಣ್ಣೆ ಚಲುವ ಚಿತ್ತಾರ ಮನಕೆ
ಜಗಕೆ ಮತ್ತೆ ನವ ಚೇತನ
ನಾ ತೀರಿಸಲೆಂತು ಧರೆಯ ಋಣ

                                                                                                      – ಉಮಾ ಭಾತಖಂಡೆ

102
Leave a Reply