ತವಕ

ತವಕ
ಇರುಳು ಸರಿದಂತೆ ಮೂಡುವ ತಾರೆಗಳ
ಎಣಿಸುವ ತವಕ ನಿನ್ನೊಟ್ಟಿಗೆ

ಹಸನಾದ ಉದ್ಯಾನದಲಿ ಅರಳಿದ ಕುಸುಮಗಳ
ಮೆಲ್ಲನೆ ಬಿಡಿಸುವ ತವಕ ನಿನ್ನೊಟ್ಟಿಗೆ

ಕಡಲ ತೀರದಲಿ ಕಪ್ಪೆಚಿಪ್ಪುಗಳ ತಂದು
ಮುತ್ತ ಹುಡುಕುವ ತವಕ ನಿನ್ನೊಟ್ಟಿಗೆ

ಸುರಿವ ಸೋನೆಯಲಿ ತೋಯ್ದು
ಆಲಿಕಲ್ಲು ಆರಿಸುವ ತವಕ ನಿನ್ನೊಟ್ಟಿಗೆ

ಬೆಳದಿಂಗಳ ಶಶಿಯ ನೋಡುತ
ಇರುಳ ಸವೆಸುವ ತವಕ ನಿನ್ನೊಟ್ಟಿಗೆ

ಉಮಾ ಭಾತಖಂಡೆ.

Leave a Reply