ಸಂಜೆಯ – ಒಂದು ನೆನಪಿನ ಕನಸಿನಲ್ಲಿ

ಒಂದು ಸಂಜೆ ಇಂಗ್ಲೆಂಡಿನ ಉದ್ಯಾನದಲ್ಲಿ ಆಹ್ಲಾದಕರ ವಾತಾವರಣ ಸವಿಯುತ್ತ, ಆಟ ಆಡುವ ಮಕ್ಕಳ ಸಂತೋಷದಲ್ಲಿ ಭಾಗಿಯಾಗುತ್ತ, ತಿಳಿಯಾದ ಗಾಳಿ ಸೇವಿಸುತ್ತ ಸುತ್ತುತ್ತಿದ್ದೆ. ಸೂರ್ಯ ಮುಳುಗುವ ಸಮಯವದು, ಅದನ್ನು ನೋಡುತ್ತಾ ಮನಸ್ಸು ಸುಬ್ರಾಯ ಚೊಕ್ಕಾಡಿ ಅವರು ಬರೆದ ಕವನ ಮೆಲಕು ಹಾಕತೊಡಗಿತು

ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳೆಕಿನ ಕೋಡಿ ಚೆಲ್ಲಾಡಿದೆ
ಈಗ ರಂಗೇರಿದೆ……

ನಾವು ಚಿಕ್ಕವರಿದಾಗ ಅನುಭವಿಸಿದ ಸಂಜೆಯ ಸೊಬಗಿಗೂ ಈಗಿನ ಸಂಜೆಗೂ ಎಷ್ಟು ವ್ಯತ್ಯಾಸ…

ಬಣ್ಣ ಬಣ್ಣದ ಗೋಲಿ ಆಟ, ಚಿನ್ನಿ ದಾಂಡು, ಬುಗುರಿ ಆಟ……. ಕಟ್ಟೆಯ ಹರಟೆ …..

ಅದು ನಿಜವಾದ ಸಂಜೆಯ ರಾಗ …. ಮನೆಗೆ ಮರಳುತ್ತಿರುವ ಗೋವುಗಳ ಸದ್ದು ….ಹಕ್ಕಿಗಳ ಕಲರವ …. ಮಕ್ಕಳ ಆಟದ ಸದ್ದು…. ಜನರ ಮಾತು….ಎಲ್ಲವು ಸೇರಿದಾಗ ಅದು ನಿಜವಾಗಿಯೂ ಸುಶ್ರಾವ್ಯ ಸಂಗೀತ

ವಿಶ್ರಮಿಸಲು ಹೋಗುತ್ತಿರುವ ಸೂರ್ಯ ಮೂಡಿಸಿದ ಕೆಂಪು ಬಣ್ಣದ ಮೋಡಿ ಈ ವಾತಾವರಣಕ್ಕೆ ಇನ್ನೊಂದು ಆಯಾಮ ಸೃಷ್ಟಿಸುತ್ತದೆ…. ಗೋವಿನ ನಡಿಗೆಯಿಂದ ಎದ್ದ ಧೂಳು ಈ ಚಿತ್ರದ ಪದರಿನಂತೆ ಕಾಣುತ್ತದೆ

‘ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ’ ….ಕವನದ ಈ ಸಾಲು ನಿಜಕ್ಕೂ ಸತ್ಯ …ಸಂಜೆಯ ಧೂಳಿನ ಗಂಧವು ನಮ್ಮನ್ನು ಪೂರ್ಣವಾಗಿ ಆವರಿಸುತ್ತದೆ…. ಅದೊಂದು ಅವರ್ಣನೀಯ ಅನುಭವ…

ಮಗ ಬಂದಾಗ ಈ ಸುಂದರವಾದ ನೆನಪಿನ ಕನಸಿನಿಂದ ಹೊರಬಂದೆ….. ಸಂಜೆಯ ಕೆಂಪಾದ ದೃಶ್ಯ ನೋಡುತ್ತಾ ಮನೆಗೆ ಹೊರಟೆ….

Leave a Reply