ಇಸ್ಲಾಂಪುರವೆಂಬ ಮುಸ್ಲೀಮರೂರು

ಇಸ್ಲಾಂಪುರವೆಂಬ ಮುಸ್ಲೀಮರೂರು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ:

ನಾಟಕ: ಆಲೀಬಾಬಾ | ನೀನಾಸಮ್ ತಿರುಗಾಟ | ನಾಟಕಕಾರ/ಗೀತಕಾರ: ಚಂದ್ರಶೇಖರ ಕಂಬಾರ | ನಾಟಕ ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ | ಸಂಗೀತ ಸಂಯೋಜನೆ: ಅಕ್ಷರ ಕೆ.ವಿ

ಇಸ್ಲಾಂಪುರವೆಂಬ ಮುಸ್ಲಿಮರೂರು, ಅಲ್ಲಾನ ಭಕ್ತರು ಅಲ್ಲಿಯ ಜನರು
ಎದ್ದರೆ ಬಿದ್ದರೆ ಅಲ್ಲಾ ಎನ್ನುವರು, ಎದ್ದಾಗ ಶ್ರೀಮಂತರಾದರು ಕೆಲರು
ಆ ಊರಿನಲ್ಲೊಬ್ಬ ಆಲೀಬಾಬಾ, ಅಂತಿದ್ದ ಅಲ್ಲಾಗೆ ತೋಬಾತೋಬಾ
ಆತನ ಕಂಡರೆ ಅಲ್ಲಾನಿಗಿಷ್ಟ, ಹಾಗಂತ ಕೊಟ್ಟಿದ್ದ ಬಡತನ ಕಷ್ಟ
ಬಡತನ ತೊಲಗಿಸೊ ದೇವರೆ ಅಲ್ಲಾ, ಅಲ್ಲಾನೆ ಖುದ್ದಾಗಿ ಅಂತಿದ್ದ ಇಲ್ಲ
ಪ್ರಾರ್ಥಿಸಿಕೊಂಡನು ದೌಲತ್ತು ಬೇಡಿ, ಅಲ್ಲಾ ಕೊಟ್ಟನು ಮಗನ ಅವನೊಬ್ಬ ಖೋಡಿ
ದಿನದಿನ ಆಲಿಬಾಬಾ ಕಾಡಿಗೆ ಹೋಗಿ, ಒಣಸೌದೆ ಕಲೆಹಾಕಿ ಹೊರೆಗಳ ಕಟ್ಟಿ
ಅಬ್ಬಾ ಎನ್ನುತ ಕತ್ತೆ ಡುಬ್ಬಿಗೆ ಹೇರಿ, ಉಬ್ಬಿ ಮಾರುತಲಿದ್ದ ಊರೂರು ಕೇರಿ
ಕತ್ತೆಗಳೆಂದರೆ ಕತ್ತೆಗಳಣ್ಣ, ಸಂಗೀತವೆಂದರೆ ಅವುಗಳಿಗೆ ಪ್ರಾಣ
ಅವುಗಳ ಸಂಗೀತ ಸಭೆಗಳ ಮುಂದೆ, ನಾವೇನು ಹಾಡೇವು ಕುರಿಗಳ ಮಂದೆ

Leave a Reply