“ಬಿಂಬ— ಆ ತೊಂಬತ್ತು ನಿಮಿಷಗಳು”

ಕಾರ್ಯಕ್ರಮ: “ಬಿಂಬ— ಆ ತೊಂಬತ್ತು ನಿಮಿಷಗಳು” ಚಲನಚಿತ್ರ ಪ್ರದರ್ಶನ ಮತ್ತು ಶ್ರೀನಿವಾಸ್ ಪ್ರಭು ಅವರೊಡನೆ ಮಾತುಕತೆ
ದಿನಾಂಕ: ೧೮ ಏಪ್ರಿಲ್ ೨೦೨೦, ಶನಿವಾರ
ಸಮಯ: ಯು ಕೆ ಸಮಯ ಮಧ್ಯಾಹ್ನ ೧.೩೦ – ೪.೦೦ ಗಂಟೆಗೆ , ಭಾರತೀಯ ಸಮಯ ಸಾಯಂಕಾಲ ೬.೦೦ – ೮.೩೦ ಗಂಟೆಗೆ
ಸ್ಥಳ-Cisco WebEx,

ಹೆಚ್ಚಿನ ವಿವರಕ್ಕೆ: https://vividlipi.com/events/
ವಿವಿಡ್ಲಿಪಿ ಆಂಡ್ರಾಯ್ಡ್ ಅಪ್ಲಿಕೇಶನ್ – https://bit.ly/2JWfQLl

ಶ್ರೀನಿವಾಸ ಪ್ರಭು ಕನ್ನಡ ಕಿರು ತೆರೆ, ರಂಗಭೂಮಿ ಮತ್ತು ಚಿತ್ರರಂಗದ ಪರಿಚಿತ ಹೆಸರು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಇಂದ ತರಬೇತಿ ಪಡೆದಿದ್ದಾರೆ. ರವಿಚಂದ್ರನ್ ಅವರಿಗೆ ಪ್ರೇಮಲೋಕ,ಅಂಜದ ಗಂಡು ಮತ್ತು ರಣಧೀರದಲ್ಲಿ ಧ್ವನಿ ಕೊಟ್ಟಿದ್ದಾರೆ ಮತ್ತು ಹಲವು ಕನ್ನಡ ಚಿತ್ರಗಳಲ್ಲಿ ಪಾತ್ರ ವಹಿಸಿದ ಹಿರಿಮೆ ಇವರದು. ಕಿರು ತೆರೆಯಲ್ಲಿ ಜನನಿ, ಆಸರೆ, ಸಂಜೆ ಮಲ್ಲಿಗೆ, ಮುಕ್ತ, ನಾಕು ತಂತಿ, ಕುಟುಂಬ, ಮನೆಯೊಂದು ಮೂರು ಬಾಗಿಲು, ಗುಪ್ತಗಾಮಿನಿ, ಕಾದಂಬರಿ, ಗೀತಾಂಜಲಿ, ಥಕಧಿಮಿ ಥಾ, ಪುಣ್ಯಕೋಟಿ ಮುಂತಾದವುಗಳಲ್ಲಿ ನಟಿಸಿದ್ದಾರೆ. ಗುಳ್ಳೆ ನರಿ ನಾಟಕಕ್ಕೆ ೧೩ ಹಾಡುಗಳನ್ನು ರಚಿಸಿದ ಇವರು ಹಿಂದೂಸ್ತಾನಿ ಗಾಯಕರು ಕೂಡ

ಶ್ರೀನಿವಾಸ ಪ್ರಭು ಚಿತ್ರಕತೆ ಬರೆದು, ನಿರ್ದೇಶಿಸಿ, ಅಭಿನಯ ಮಾಡಿದ ಚಿತ್ರ “ಬಿಂಬ— ಆ ತೊಂಬತ್ತು ನಿಮಿಷಗಳು”.ಈ ಚಿತ್ರ ವಿಶ್ವದಾಖಲೆ ಬರೆದಿದೆ!!ಪ್ರತಿಷ್ಠಿತ UNIVERSAL RECORDS FORUM ಸಂಸ್ಥೆಯವರು “ಏಕ ಪಾತ್ರಧಾರಿಯ,ಒಂದೇ ಶಾಟ್ ನಲ್ಲಿ ಚಿತ್ರೀಕರಿಸಿರುವ ಪ್ರಪ್ರಥಮ ಚಿತ್ರ” ಎಂದು “ಬಿಂಬ” ಚಿತ್ರವನ್ನು ದಾಖಲಿಸಿದ್ದಾರೆ! INDIA BOOK OF RECORDS ಸಂಸ್ಥೆಯವರು”ಒಬ್ಬನೇ ಪಾತ್ರಧಾರಿಯ,ಒಂದೇಶಾಟ್ ನಲ್ಲಿ ಚಿತ್ರೀಕರಿಸಿರುವ,ಒಂದೇ ವಾದ್ಯದ(ಕೊಳಲು) ಸಂಗೀತದ ಪ್ರಥಮ ಚಿತ್ರ—A DIVERGENT FILM” ಎಂದು ಗುರುತಿಸಿ ದಾಖಲಿಸಿದ್ದಾರೆ!

Leave a Reply