“ಅನುಕ್ತ”

ವಾಸುದೇವ ನಾಡಿಗ್ ಪ್ರ: ಗೋಮಿನಿ ಪ್ರಕಾಶನ ಮೊ: 99866 92342ಪ್ರತಿಯೊಬ್ಬರ ಜೀವನದಲ್ಲಿ ನಡೆದ ಯಾವುದೋ ಘಟನೆಗಳು, ಸನ್ನಿವೇಶಗಳು ಇನ್ಯಾವುದೋ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ ಅನುಕ್ತ. ವಾಸುದೇವ ನಾಡಿಗ್‌ ಅವರು ತಮ್ಮ ಪದ್ಯದಲ್ಲಿ ಓದುಗನನ್ನು ಜೊತೆಗೂಡಿಸಿಕೊಳ್ಳುವ ಪರಿ ಕಾಣುತ್ತದೆ. ವಸ್ತು ಚಿಕ್ಕದಾದರೂ ಭಾವ ದೊಡ್ಡದು ಎಂಬುದನ್ನು ಸಾಬೀತುಪಡಿಸುವಂತೆ ಓದುಗನನ್ನು ಮತ್ತೆ ಸೆಳೆಯುತ್ತದೆ. ಅಮ್ಮನ ಅಕ್ಕರೆ, ಅಜ್ಜಿಯ ಊರುಗೋಲು, ಅಜ್ಜಿಯ ರೇಡಿಯೋ ಹುಚ್ಚು, ಪ್ರೇಯಸಿಯ ದೆಸೆಯಲ್ಲಿ ಖಾಲಿಯಾದ ಕಿಸೆ.. ಈ ಎಲ್ಲಾ ಸಂಗತಿಗಳು ನಮ್ಮ ಬದುಕಿನಲ್ಲಿ ನಡೆದಿದ್ದರೂ ನಮ್ಮ ಅರಿವಿಗೆ ಬರುವುದಿಲ್ಲ. ಇವುಗಳನ್ನು ಕವಿ ಅಕ್ಷರರೂಪದಲ್ಲಿ ಹಿಡಿದಿಟ್ಟಿರುವುದು ವಿಶೇಷ. ಈ ಕವನ ಸಂಕಲನದಲ್ಲಿರುವ ಪ್ರತಿ ಕವಿತೆಗಳು ಓದುಗರಿಗೆ ಹಳೆಯ ನೆನಪುಗಳನ್ನೂ ಕಣ್ಮುಂದೆ ತಂದುಕೊಡುತ್ತವೆ ಎಂದರೂ ಅತಿಶಯ ಎನಿಸುವುದಿಲ್ಲ. ಕಾವ್ಯಕುಲುಮೆಯಲ್ಲಿ ಮಿಂದೆದ್ದ ಈ ಕವಿತೆಗಳು ತಣ್ಣಗಿನ ಮೌನದಲ್ಲಿ ಬೀಳಿಸುವ ಗುಣಗ್ರಾಹಿಯೂ ಆಗಿವೆ

courtsey:prajavani.net

https://www.prajavani.net/artculture/book-review/anukta-653971.html

Leave a Reply