‘ಆರಾಧನೆ ಇಲ್ಲದ ಕಲೆಯಿಲ್ಲ’

‘ಆರಾಧನೆ ಇಲ್ಲದ ಕಲೆಯಿಲ್ಲ’

ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಶ್ರೀಅಖಿಲ ಹವ್ಯಕ ಮಹಾಸಭೆಯ ಆಶ್ರಯದಲ್ಲಿ ಹವ್ಯಕ ಭವನದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಚಿತ್ರಕಲಾಶಿಬಿರ ಹಾಗೂ ಪಾರಂಪರಿಕ ಕಲಾಮಂಡಲಗಳ ಶಿಬಿರದ ಸಮಾರೋಪ ಸಭೆ ನಡೆಯಿತು.

ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಶ್ರೀಅಖಿಲ ಹವ್ಯಕ ಮಹಾಸಭೆಯ ಆಶ್ರಯದಲ್ಲಿ ಹವ್ಯಕ ಭವನದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಚಿತ್ರಕಲಾಶಿಬಿರ ಹಾಗೂ ಪಾರಂಪರಿಕ ಕಲಾಮಂಡಲಗಳ ಶಿಬಿರದ ಸಮಾರೋಪ ಸಭೆ ನಡೆಯಿತು.

‘ನಮ್ಮ ಸಂಸ್ಕೃತಿಯಲ್ಲಿ ಲೌಕಿಕ – ವೈದಿಕ ಎಂಬ ಭೇದವಿಲ್ಲ. ಕಲೆಗಳಲ್ಲಿ ಭೇದ ಮಾಡುವುದು ಅವಿವೇಕತನ. ಆರಾಧನೆ ಇಲ್ಲದ ಕಲೆಯಿಲ್ಲ, ಕಲೆಯಿಲ್ಲದ ಆರಾಧನೆಯಿಲ್ಲ’ ಎಂದು ಶತಾವಧಾನಿ ಆರ್. ಗಣೇಶ್ ಅಭಿಪ್ರಾಯಪಟ್ಟರು. ನೃತ್ಯಶಾಸ್ತ್ರದ ಜ್ಞಾನ ಇಲ್ಲದವನು ಉತ್ತಮ ಚಿತ್ರಕಾರ ಆಗಲಾರ. ನಾಟ್ಯ, ಸಂಗೀತ ಮುಂತಾದವುಗಳ ಅರಿವು ಇದ್ದರಷ್ಟೇ ಒಬ್ಬ ಪರಿಪೂರ್ಣ ಚಿತ್ರರಚನಾಕಾರ ಆಗಲು ಸಾಧ್ಯ ಎಂದು ಹೇಳಿದರು.

ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಕಲಾವಿದನ ಕಲೆಯನ್ನು ಕಣ್ಣಿನಿಂದ ಮಾತ್ರವಲ್ಲದೇ ಹೃದಯದಿಂದ ಕಂಡಾಗ ಅದು ಹೆಚ್ಚು ಅರ್ಥಗರ್ಭಿತವಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಶಿಲ್ಪಶಿಲಾ ಅಕಾಡೆಮಿ ಅಧ್ಯಕ್ಷ ಡಾ.ಕಾಳಾಚಾರ್, ಲಲಿತಕಲಾ ಅಕಾಡೆಮಿಯ ಸದಸ್ಯರಾದ ಡಾ.ಎಂ.ಜೆ. ಕಮಲಾಕ್ಷಿ ಮತ್ತು ಜಿ.ಎಸ್. ಹೆಗಡೆ ಹಾಜರಿದ್ದರು.

Courtesy : Prajavani.net

http://www.prajavani.net/news/article/2018/05/02/570001.html

Leave a Reply