“ಪುಸ್ತಕ ವಿಮರ್ಶೆ”,

ಪುಸ್ತಕ: ಕುವೆಂಪು ದರ್ಶನ ಮೀಮಾಂಸೆ ಲೇ: ನರಹಳ್ಳಿ ಬಾಲಸುಬ್ರಹ್ಮಣ್ಯ ಪ್ರ: ಅಭಿನವ ಮೊ:94488 04905 ಬೆಲೆ ₹100 ಪುಟ 112 ಕುವೆಂಪು ಆರೇಳು ದಶಕಗಳ ಹಿಂದೆ ಪ್ರತಿಪಾದಿಸಿದ್ದ ತತ್ವಗಳನ್ನು ಸಮಕಾಲೀನ‌ ಕನ್ನಡಿಯೊಳಗಿಟ್ಟು ನೋಡುವ ಕೃತಿಯೇ ಕುವೆಂಪು ದರ್ಶನ ಮೀಮಾಂಸೆ. ‘ಪ್ರಗತಿ, ಉದ್ಧಾರ, ಧ್ಯೇಯ ಸಿದ್ಧಿ, ಕಲ್ಪಿಸಿದಂತೆ ವಾಸ್ತವಾಗುವುದು ಇಲ್ಲ. ಸಂಕಲ್ಪಿಸಿದ ರೀತಿಯಲ್ಲಿ ಕೈಗೂಡುವುದಿಲ್ಲ. ಪ್ರಪಂಚದ ಮಾನಸ ಶಕ್ತಿಗಳ ಸಂಘರ್ಷಣೆಯ ಫಲರೂಪವಾಗಿ ಅನಿರೀಕ್ಷಿತಗಳು ಬಂದೊಗುತ್ತವೆ. ನಮ್ಮ ಪಯಣದ ದಾರಿ ಮಾತ್ರವಲ್ಲದೆ ದಿಕ್ಕೂ ಬದಲಾಗಿ ಬಿಡುತ್ತದೆ. ನಮ್ಮ ದೇಶದಲ್ಲಿಯೂ ಆದದ್ದು ಬೇರೆ’ ಎಂದು ಕುವೆಂಪು ಅವರ ಮಾತುಗಳನ್ನು ಉಲ್ಲೇಖಿಸುವ ಲೇಖಕರು ‌ ಸಮಕಾಲೀನ ತಲ್ಲಣಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಪುಸ್ತಕದುದ್ದಕ್ಕೂ ಕುವೆಂಪು ಅವರು ಪ್ರತಿಪಾದಿಸಿದ್ದ ಆಶಯಗಳು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಯೋಚನೆಗಳ ಮುಖಾಮುಖಿಯನ್ನು ಕಾಣಬ ಹುದು. ಇಲ್ಲಿ ವಿಚಾರಗಳಷ್ಟೆ ಅಲ್ಲದೇ ಕುವೆಂಪು ಅವರ ಕಾವ್ಯ ಮತ್ತು ಕಾವ್ಯದೆಡೆಗೆ ಕುವೆಂಪು ಹೊಂದಿದ್ದ, ದೃಷ್ಟಿಕೋನವನ್ನು ವಿಷದಪಡಿಸಲಾಗಿದೆ. ಕುವೆಂಪು ಕಾವ್ಯಸೃಷ್ಟಿಯ ಬಗೆಗಿನ ಕುತೂಹಲ ಇರುವವರ ಅಧ್ಯಯನಕ್ಕೆ ಇಲ್ಲಿನ ಚರ್ಚೆ ಪೂರಕ. ಮೌಢ್ಯ ಮತ್ತು ವಿಚಾರವಾದವೆನ್ನುವುದು ಮನುಷ್ಯನಲ್ಲಿ ಹೇಗೆ ವಿರೋಧಭಾಸವನ್ನು ಹುಟ್ಟುಹಾಕಿದೆ ಎಂಬುದನ್ನು ಕೌತುಕದ ನೆಲೆಯಲ್ಲಿಯೂ ವಿಶ್ಲೇಷಿಸಿರುವುದು ಈ ಪುಸ್ತಕದ ಅಗ್ಗಳಿಕೆ. ಕುವೆಂಪು ಸಾಹಿತ್ಯ ಓದಿಗೆ ಈ ಪುಸ್ತಕವನ್ನು ಪ್ರವೇಶಿಕೆಯಂತೆ ಭಾವಿಸಲು ಅಡ್ಡಿಯಿಲ್ಲ. …….ಪುಸ್ತಕ: ಬಾಯಾರಿದ ಬೆಂಗಳೂರು ಲೇಖಕರು: ಟಿ.ಎಂ.ಶಿವಶಂಕರ ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು. ದೂರವಾಣಿ: 22107704 ಪುಟಗಳು: 208+8 ಬೆಲೆ:₹175 ಸೃಷ್ಟಿಗೆ ಮೂಲ ಘಟಕಗಳಾಗಿ ಕಂಡುಕೊಂಡ ಪಂಚ ಮಹಾಭೂತಗಳ ಪಂಕ್ತಿಯಲ್ಲಿ ನೆಲಕ್ಕೆ ಮೊದಲ ಸ್ಥಾನವಾದರೆ, ಜಲಕ್ಕೆ ಮೂರನೇ ಸ್ಥಾನ ಎಂಬತೆ ಬಾಯಾರಿದ ಬೆಂಗಳೂರು ಎಂಬ ಪುಸ್ತಕವನ್ನು ಟಿ.ಎಂ.ಶಿವಶಂಕರ್‌ ಲೇಖಕರಾಗಿ ಹೋರ ತಂದಿದ್ದಾರೆ. ಈ ಪುಸ್ತಕದಲ್ಲಿ ಲೇಖಕರು ಬೇಂಗಳೂರಿನ ಇತಿಹಾಸವನ್ನು ಮತ್ತು ಬೆಳೆದು ಬಂದ ರೀತಿಯನ್ನು ಹಾಗೇಯೇ ಬೆಂಗಳೂರಿನ ಕೆರಗಳು ಯಾವ ರೀತಿಯಲ್ಲಿ ರೂಪುಗೊಂಡಿದ್ದು ಜಲಮಂಡಳಿಯು ನೀರುನ್ನು ಪೂರೈಸುವಲ್ಲಿ ಹೇಗೆ ಪಾತ್ರ ವಹಿಸುತ್ತಿದೆ ಎಲ್ಲೆಲ್ಲಿಂದ ನೀರನ್ನು ಬೆಂಗಳೂರಿಗೆ ಪೂರೈಸುತ್ತಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಈ ಪುಸ್ತಕವು 20 ಅಧ್ಯಾಯ ಅಥವಾ ಸಂಗತಿಗಳನ್ನು ಒಳಗೊಂಡಿದ್ದು ಅದರಲ್ಲಿ ಸದಾ ಬಾಯಾರಿದ ನಗರ ಎಂಬ ಸಂಗತಿಯಲ್ಲಿ ನೀರಿನ ಮಹತ್ವವನ್ನು ಮತ್ತು ಜಲದ ವಿತರಣೆಯನ್ನು ಮತ್ತು ಜಲ ಎಷ್ಟು ಪ್ರಮಾಣದಲ್ಲಿ ನಮಗೆ ಸಿಗುತ್ತಿದೆ ಇಂಬುದನ್ನು ಈ ಒಣದು ಸಂಗತಿಯಲ್ಲಿ ಲೇಖಕರು ವಿವಿರಿಸಿದ್ದಾರೆ. ಬೆಂಗಳೂರಿನಲ್ಲಿ ಬದುಕುತ್ತಿರು ಪ್ರತಿಯೋಬ್ಬರಿಗೂ ಪುಸ್ತಕವು ಸಹಕಾರಿಯಾಗಿದೆ. ……..ಸಂಬಂಧಗಳತ್ತ ಒಂದು ಚಿತ್ತ ಮನೋ ಸಾಮಾಜಿಕ ವಿಶ್ಲೇಷಣೆ ಲೇಖಕರು: ಡಾ. ವಿ. ಇಂದಿರಮ್ಮ ಪ್ರಕಾಶಕರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಬೆಂಗಳೂರು ಮೊ: 9740811455 ಪುಟ: 65 ಸಂವಹನ ಕೌಶಲ್ಯ ಎಂಬುದು ಮಾನವ ಸಂಬಂಧಗಳನ್ನು ಗಟ್ಟಿಗೊಳಿಸುವ ಹಾಗೂ ಮೌಲ್ಯಾಧಾರಿತ ಬದುಕನ್ನು ರೂಪಿಸಲು ಮೊದಲ ಪಾತ್ರ ವಹಿಸುತ್ತದೆ. ಮನುಷ್ಯ ಸಂಘ ಜೀವಿ, ಒಂಟಿಯಾಗಿ ಬದುಕಲಾರ ಎಂಬ ಮಾತಿದೆ. ಈ ಮಾತು ಎಷ್ಟು ವಾಸ್ತವ ಎಬುದಕ್ಕೆ ನಮ್ಮ ಬದುಕೇ ಸಾಕ್ಷಿ. ಜೀವನದುದ್ದಕ್ಕೂ ಸಂವಹನ ಹೇಗಿರಬೇಕು? ಆ ಕಲೆಯನ್ನು ವೃದ್ಧಿಸಿಕೊಳ್ಳುವುದು ಹೇಗೆ ಅದರ ಫಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಒಟ್ಟು ಆಶಯ ಈ ಹೊತ್ತಿಗೆಯದ್ದು. ಜಗತ್ತಿನಲ್ಲಿ ಸ್ನೇಹ, ಪ್ರೀತಿ ಹಾಗೂ ಸಂಸಾರದ ಸಂಬಂಧಗಳು ಮುರಿಯಲು ಮೂಲ ಕಾರಣ ಸಂವಹನ. ಇವುಗಳನ್ನು ಕಾಪಾಡಿಕೊಳ್ಳಲು ಮೂಲ ಮಂತ್ರವೇ ಮಾತು. ಆರೋಗ್ಯಕರ ಸಂವಹನ ಸಂಬಂಧಗಳ ಬೇರು ಬಿಗಿಯಾಗುವಂತೆ ಪರಿವರ್ತಿಸುತ್ತದೆ. ಈ ಕಲೆ ಎಲ್ಲರಲ್ಲಿಯೂ ಇರುವುದಿಲ್ಲ. ಹಾಗಾಗಿಯೇ ಪರಸ್ಪರ ವಿರೋಧ, ದ್ವೇಷ ಮುಂತಾದವುಗಳ ಕಾರಣದಿಂದ ಭಾಂದವ್ಯ ಕಳೆದುಕೊಳ್ಳುವುದು. ಸಂಬಂಧ ಕಳೆದುಕೊಳ್ಳಬಾರದು, ಸಂವಹನದಿಂದ ಭಾಂದವ್ಯ ಬೆಳೆಯಬೇಕು ಎಂಬ ಒತ್ತಾಸೆಯಿಂದ ಇಂದಿರಮ್ಮ ಅವರು ಈ ಕೃತಿಯ ಮೂಲಕ ಪ್ರಯತ್ನಿಸಿದ್ದಾರೆ. ……..ಪುಸ್ತಕ: ನೆರಪ್ರಸಾರ ಮತ್ತು ಚಿಕ್ಕ ವಿರಾಮ ಲೇಖಕರು: ಶ್ರೀನಿವಾಸ ಜೋಕಟ್ಟೆ ಪ್ರಕಾಶಕರು: ಸುಂದರ ಪ್ರಕಾಶನ ಬೆಂಗಳೂರು. ಮೊಬೈಲ್ :9538038383 ಜೀವನದ ವಿವಿಧ ಮಜಲುಗಳನ್ನು ಪರಿಚಯಿಸಿದಂತ ಈ ಕಥಾ ಸಂಕಲನ ನೇರ ಪ್ರಸಾರ ಮತ್ತು ಚಿಕ್ಕವಿರಾಮ ಹೆಸರು ಸೂಚಿಸುವಂತೆ ನೇರವಾಗಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದಂತಹ ಲೇಖನಗಳನ್ನು ಕಥಾ ಸಂಕಲನವಾಗಿ ಪರಿಚಯಿಸಿದ್ದಾರೆ. ಈ ಕಥಾ ಸಂಕಲನದಲ್ಲಿ ಲೇಖಕರು ತಮ್ಮ ಜೀವನದಲ್ಲಿನ ಕೆಲವು ಸುಖಕರ ಮತ್ತು ದುಖಕರ ಸಂಗತಿಗಳು ಮತ್ತು ಸ್ನೇಹಿತರ ಜೋತೆಯಲ್ಲಿನ ಅನುಭವಗಳು ವಿವಿಧ ಹೆಸರಿನಲ್ಲಿ ಕಥೆಗಳನ್ನು ಚಿತ್ರಸಿದ್ದಾರೆ, ಅಷ್ಟೆ ಅಲ್ಲದೆ ಪ್ರಯಾಣದ ವೇಳೆ ಹಲವು ನಗರಗಳಲ್ಲಿ ಆಕಸ್ಮಿಕವಾಗಿ ಅನುಭವಿಸಿದ ಸಂಗತಿಗಳು ಮತ್ತು ಕುಟುಂಬದ ಜೊತೆಯಲ್ಲಿ ಅನುಭವಿಸಿದ ಸಂಗತಿಗಳು ಮತ್ತು ಪ್ರೀತಿಯ ಸಂಗತಿಗಳನ್ನು ಇಲ್ಲಿ ಕಾಣಬಹುದು.ಸರಳ ಭಾಷಾ ಶೈಲಿಯನ್ನು ಹೊಂದಿದ ಈ ಪುಸ್ತಕವು 28 ಆಯ್ದ ಕಥೆಗಳನ್ನು ಹೊಂದಿದ್ದು ಓದಿನ ಆಸಕ್ತಿಯನ್ನು ಹೆಚ್ಚಿಸಿ ಒಂದೊಂದು ಕಥೆಯಲ್ಲಿನ ಸಂಗತಿಗಳು ಸ್ವತಃ ನಾವೆ ಅನುಭವಿಸಿದಂತೆ ನಮ್ಮದೆ ಜೀವನದ ಸಂಗತಿಗಳಂತೆ ಭಾಸವಾಗುತ್ತದೆ. ಈ ಪುಸ್ತಕವು ನಿಜ ಜೀವನಕ್ಕೆ ಹಿಡಿದ ಕೈಕನ್ನಡಿಯಾಗಿದೆ ಎಂದು ಹೇಳಬಹದು.

courtsey:prajavani.net

https://www.prajavani.net/artculture/book-review/pustaka-vimarse-647658.html

Leave a Reply