ಬನ್ನಿ ಗೆಳೆಯರೆ

ಬನ್ನಿರಿ ಗೆಳೆಯರೆ ಆಡೋಣ ನಾವು ನೀವು ಜೋಕಾಲಿ ಅಕ್ಕತಂಗೇರು ಸೇರೋಣ ಸೇರಿ ಆಡೋಣ ಜೋಕಾಲಿ ಅಮ್ಮನು ಮಾಡಿದ ಗರಿಗರಿ ಚಕ್ಕುಲಿ ತಿಂದು ನಾವು ಆಡೋಣ ಅಜ್ಜಿಯು ಮಾಡಿದ ಕರ್ಚಿಕಾಯಿ ಸವಿಯುತ ನಾವು ಹಾಡೋಣ ಅಪ್ಪನು ತಂದ ಹೊಸಹೊಸ ಬಟ್ಟೆ ತೊಟ್ಟು ನಾವು ಕುಣಿಯೋಣ ಅಣ್ಣನು ಮಾಡಿದ ಕೊಬ್ಬರಿ ಗಿರಿಕೆಯನ್ನು ಆಡೋಣ ಅತ್ತಿಗೆ ತಂದ ಬೇಸನ ಉಂಡಿ ಸವಿಯುತ ನಾವು ನಲಿಯೋಣ ಮಾವನು ತಂದ ಬಣ್ಣದ ಬುಗರಿ ಭರದಿಂದ ನಾವು ಆಡೋಣ ಅಜ್ಜನು ಹೊಸೆದ ಹಗ್ಗದಿಂದ ಜೋಕಾಲಿ ಕಟ್ಟೋಣ ದೊಡ್ಡಪ್ಪನು ಮಾಡಿದ ಬಟ್ಟೆ ಚಂಡಲಿ ದಪ್ಪೆದುಪ್ಪೆ ಆಡೋಣ ಚಿಕ್ಕಮ್ಮ ಕೊಡುವ ಚಿನ್ನಿ ಸಕ್ಕರೆ ಅಕ್ಕರೆಯಿಂದ ತಿನ್ನೋಣ ಚಿಕ್ಕಪ್ಪ ಆಡಿಸುವ ಕುರಿಮರಿ ಆಟ ಸರದಿ ಸಾಲಲ್ಲಿ ಅಡೋಣ.

courtsey:prajavani.net

https://www.prajavani.net/artculture/poetry/poem-661734.html

Leave a Reply