ಕಪಾಟು

ಜನಮನದಲ್ಲಿ ನೆಲೆಯಾಗಿರುವ ರಾಘವೇಂದ್ರ ಗುರುಗಳ ಮಹಿಮೆಗಳನ್ನು ಯು.ಪಿ.ಪುರಾಣಿಕ್‌ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ 23 ಅಧ್ಯಾಯಗಳಿವೆ. ವಿಶ್ವಗುರು ಶ್ರೀ ರಾಘವೇಂದ್ರರ ವಿಚಾರಧಾರೆ, ಅವತಾರ, ಜೀವನ ಚರಿತ್ರೆ, ಅವರ ಪವಾಡಗಳು ಹೀಗೆ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಗುರುರಾಯರ ಸಂಪೂರ್ಣ ಮಾಹಿತಿಯನ್ನು ಈ ಕೃತಿಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಲೇಖಕ ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಯ ವಂಶವೃಕ್ಷ, ರಾಯರು ಬೃಂದಾವನ ಪ್ರವೇಶಿಸುವ ಮುನ್ನ ಹಾಗೂ ನಂತರ ನಡೆದ ಅದ್ಭುತ ಪವಾಡಗಳ ಕುರಿತ ಬರಹಗಳು ಓದಲು ಕುತೂಹಲಕಾರಿಯಾಗಿವೆ. ಲೇಖಕರು ಹಲವು ವರ್ಷಗಳಿಂದ ರಂಗಭೂಮಿ ಕಲಾವಿದರ ಜತೆಗೆ ಹೊಂದಿರುವ ಒಡನಾಟದ ಫಲವಾಗಿ ಇಲ್ಲಿನ ನುಡಿಚಿತ್ರಗಳು ಮೂಡಿಬಂದಿವೆ. ಇದರಲ್ಲಿರುವ ಹನ್ನೆರಡು ಲೇಖನಗಳು ಅರ್ಥಪೂರ್ಣವಾಗಿವೆ. ತೆರೆಯ ಮರೆಯಲ್ಲಿ ಉಳಿದಿದ್ದ ರಂಗಕಲಾವಿದರ ಬದುಕನ್ನು ಲೇಖಕರು ಸಾಧ್ಯಂತವಾಗಿ ಪರಿಚಯಿಸಿದ್ದಾರೆ. ರಂಗಕಲಾವಿದರಾದ ಪ್ರತಿಭಾ ನಾರಾಯಣ್‌, ಶಾಂತಮ್ಮ ಪತ್ತಾರ, ವೀಣಾ ಆದವಾನಿ, ಪ್ರೇಮಾ ಗುಳೇದಗುಡ್ಡ, ಹನುಮಕ್ಕ, ಗೋಪಾಲಕೃಷ್ಣ ನಾಯರಿ, ಬಾಬು ಹಿರಣ್ಣಯ್ಯ, ಶಾರದಾ, ಪುಷ್ಪಮಾಲ ಅಣ್ಣಿಗೇರಿ, ಪ್ರೇಮಾ ಬದಾಮಿ, ವಂದನಾ ಗಂಗಾವತಿ, ಜಯಶ್ರೀ ‍ಪಾಟೀಲ ಅವರ ಕುರಿತ ಅಪರೂಪದ ಮಾಹಿತಿಗಳು ಈ ಕೃತಿಯಲ್ಲಿವೆ. ಸ್ವಗತ ರೂಪದಲ್ಲಿರುವ ವ್ಯಕ್ತಿಚಿತ್ರ ಬರಹಗಳು ರಂಗಾಸಕ್ತರಷ್ಟೇ ಅಲ್ಲ, ಎಲ್ಲ ಓದುಗರ ಕುತೂಹಲ ತಣಿಸುವಂತೆ ಇವೆ. ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂಬ ಅಡಿ ಬರಹವೇ ಈ ಪುಸ್ತಕದೊಳಗೆ ಜೀವಪರವಾದದ್ದು ಇದೆ ಎನ್ನುವ ಸೂಚನೆ ಕೊಡುತ್ತದೆ.ಹಿಂದುಳಿದ ವರ್ಗ ಅಥವಾ ತಳ ಸಮುದಾಯದ ಬದುಕು ಬವಣೆಗಳು, ಸ್ಥಿತಿ–ಗತಿಗಳನ್ನು ಸವಿವರವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು ‘ಗೋಡೆ’ ಪುಸ್ತಕದಲ್ಲಿ. ‌‌ಇದರಲ್ಲಿ 171 ಲೇಖನಗಳಿವೆ. ಇದರಲ್ಲಿ ಪದ್ಯಗಳೂ ಇವೆ. ಗದ್ಯವೂ ಇದೆ. ಲೇಖಕರು ಆಯಾ ಸಂದರ್ಭದಲ್ಲಿ ಸಮಾಜದ ಆಗು–ಹೋಗುಗಳಿಗೆ ಪ್ರತಿಸ್ಪಂದಿಸಿ, ಸಾಮಾಜಿಕ ಜಾಲತಾಣದಲ್ಲಿ ಬರೆದ ಬರಹಗಳು ಇಲ್ಲಿ ಕೃತಿ ರೂಪ ಪಡೆದಿವೆ. ಎಲ್ಲ ಬರಹಗಳೂ ಓದಿಗಷ್ಟೇ ಸೀಮಿತವಾಗುವಂತಿಲ್ಲ, ಚಿಂತನೆಗೂ, ಮರುಚಿಂತನೆಗೂ ಯೋಗ್ಯವಾಗಿವೆ.

courtsey:prajavani.net

https://www.prajavani.net/artculture/book-review/book-review-660263.html

Leave a Reply