ಒಂದು ಕೊಲಾಜ್ ಮಕ್ಕಳ ಕವನ

ಒಂದು ಕೊಲಾಜ್ ಪುಟ್ಟನು ಗೀಚಿದ ಗೋಡೆಯ ಮೇಲಿನ ನದಿಯ ಚಿತ್ರಕೆ ಇರುವೆಗಳು ಸೇತುವೆ ಕಟ್ಟುತಿವೆ.ಯೋಧನ ಹಸಿರು ಎಲೆ ಬಳ್ಳಿಯ ಮಿಲಿಟರೀ ಯೂನಿಫಾರ್ಮಿನ ಮೇಲೆ ಇದ್ದಕ್ಕಿದ್ದಂತೆ ಗುಲಾಬಿಯೊಂದು ಅರಳಿ ನಿಂತಿದೆ ಕಚ್ಚಾ ಬಾಂಬು ಹೊತ್ತೇ ಬೆನ್ನು ಬಾಗಿದ ಜಿಹಾದಿ ಮಕ್ಕಳ ಬೆನ್ನಿಗೆ ಹೂ ಹಗುರ ಪಾಟೀ ಚೀಲ ನೇತಾಡಿದೆ ಜೈಲಿನ ದೊಡ್ಡ ಬಾಗಿಲುಗಳೆಲ್ಲಾ ತೆರೆದು ವೃದ್ಧಾಶ್ರಮದ ತಾಯಿ ಮನೆಯ ದಾರಿ ತುಳಿದಿದ್ದಾಳೆ ಬಣ್ಣ ಬಣ್ಣದ ಗಡಿ ರೇಖೆಗಳ ಬರೆದ ಕುಂಚವೊಂದು ನೀರಿನ ಬಟ್ಟಲಿನಲಿ ಎಲ್ಲ ಬಣ್ಣಗಳ ತುಸು ತುಸುವೇ ಕರಗಿಸಿ ಒಂದಾಗಿಸುತಿದೆ ಎಲ್ಲ.

author”: “ಡಾ. ಲಕ್ಷ್ಮಣ ವಿ.ಎ.

courtsey:prajavani.net

https://www.prajavani.net/artculture/poetry/collage-poem-663009.html

Leave a Reply