ತೊಟ್ಟಿಲ ಲೋಕದಲಿ

ದೊಡ್ಡವರೆಲ್ಲರ ಹೃದಯದಿ ಕಟ್ಟಿದ ತೊಟ್ಟಿಲ ಲೋಕದಲಿ ನಿತ್ಯ ಕಿಶೋರತೆ ನಿದ್ರಿಸುತಿರುವುದು ವಿಸ್ಮೃತ ನಾಕದಲಿ ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯ ಶಿಶು ಹಾಡಲಿ ಕುಣಿಯಲಿ ಹಾರಲಿ ಏರಲಿ ದಿವಿಜತ್ವಕೆ ಈ ಮನುಜ ಪಶು –ಕುವೆಂಪು.   ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ಜೀವನ ಸ್ವಪ್ರೇಮದ ಪುತ್ರಪುತ್ರಿಯರು ಅವರು. ಅವರು ನಿಮ್ಮ ಜತೆಗೆ ಇರುವುದಾದರೂ ಅವರು ನಿಮಗೆ ಸೇರಿದವರಲ್ಲ. ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು. ಆದರೆ, ಆಲೋಚನೆಗಳನ್ನಲ್ಲ. ಅವರಂತಿರಲು ನೀವು ಪ್ರಯತ್ನಿಸಬಹುದು; ಆದರೆ, ಅವರನ್ನು ನಿಮ್ಮಂತೆ ಮಾಡದಿರಿ. ಜೀವನ ಹಿಮ್ಮುಖವಾಗಿ ಹರಿಯದಿರಲಿ–ಖಲೀಲ್ ಗಿಬ್ರಾನ್‌

courtsey:prajavani.net

https://www.prajavani.net/artculture/poetry/childrens-day-special-kuvempu-poems-680432.html

Leave a Reply