ನಿಧನ ವಾರ್ತೆ

ರಾಘವೇಂದ್ರ ಆಚಾರ್ಯ

ಹುಬ್ಬಳ್ಳಿ:’ಕಸ್ತೂರಿ’ ಮಾಸಪತ್ರಿಕೆ ಸಂಪಾದಕರಾಗಿದ್ದ ‘ಪದಾರ್ಥ ಚಿಂತಾಮಣಿ’ ಖ್ಯಾತಿಯ ಪಾ.ವೆಂ. ಆಚಾರ್ಯ
ಅವರ ಮೂರನೇ ಪುತ್ರ ರಾಘವೇಂದ್ರ ಆಚಾರ್ಯ ಬುಧವಾರ ಮಧ್ಯರಾತ್ರಿ ನಿಧನ ಹೊಂದಿದರು.ಅವರಿಗೆ ೭೪ ವರ್ಷ
ವಯಸ್ಸಾಗಿತ್ತು.ದಿವಂಗತರಿಗೆ ಪತ್ನಿ,ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ ಕೇಶ್ವಾಪುರ
ಮುಕ್ತಿಧಾಮದಲ್ಲಿ ನಡೆಯಿತು.

ಸಿಂಡಿಕೇಟ ಬ್ಯಾಂಕ್ ಉದ್ಯೋಗಿಯಾಗಿದ್ದ ರಾಘವೇಂದ್ರ ಆಚಾರ್ಯ ಅವರಿಗೂ ತಂದೆಯಂತೆ
ಓದು – ಬರಹದಲ್ಲಿ ಅಪಾರ ಆಸಕ್ತಿ ಇತ್ತು. ಅವರ ಲೇಖನ ಮತ್ತು ಕವನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Leave a Reply