ಸಮಾನತೆ ಸಾರುವ ಈಕ್ವಲ್‌ ರಂಗ ಉತ್ಸವ

ಕ ಲೆ, ನಾಟಕ, ಸಾಹಿತ್ಯ, ಸಂಗೀತ ಮೂಲಕ ಸಮಾನತೆಯನ್ನು ಸಾರುವ ವಿಭಿನ್ನ ‘ಈಕ್ವಲ್‌’ ರಂಗಭೂಮಿ ಹಾಗೂ ಕಲಾ ಉತ್ಸವ ರಂಗಶಂಕರದಲ್ಲಿ ನಡೆಯಲಿದೆ. ‘ಈಕ್ವಲ್- ವಾಯ್ಸಸ್ ಫಾರ್ ಕಾಮನ್ ಹ್ಯೂಮ್ಯಾನಿಟಿ (ಮಾನವೀಯತೆಗಾಗಿ ಧ್ವನಿ)’ ಎಂಬ ಘೋಷವಾಕ್ಯದಡಿ ಸೆ.13ರಿಂದ 15ರವರೆಗೆ ಈ ಉತ್ಸವ ನಡೆಯಲಿದೆ. ಅರುಣಾ ರಾಯ್, ಕಲ್ಕಿ ಸುಬ್ರಮಣಿಯಮ್, ಜೀಶಾನ್ ಹಸನ್ ಅಖ್ತರ್, ದು.ಸರಸ್ವತಿ, ಮಂಜುಳಾ ಹುಲಿಕುಂಟೆ, ಎಚ್.ಎಸ್. ಶಿವಪ್ರಕಾಶ್, ಸುಮನಾ ರಾಯ್, ಅಯಾಜ್ ರಸೂಲ್ ನಜ್ಕಿ ಮತ್ತು ತೆನ್ಜಿನ್ ಸಂಡ್ಯೂ ಮೊದಲಾದವರು ಸಮಾನತೆ ಕುರಿತ ತಮ್ಮ ಚಿಂತನೆಗಳನ್ನು ಇಲ್ಲಿ ಹಂಚಿಕೊಳ್ಳಲಿದ್ದಾರೆ. ಸಂಗೀತ ಕಾರ್ಯಕ್ರಮಗಳು, ನಾಟಕ ಪ್ರದರ್ಶನಗಳು, ಸಂವಾದ ಕಾರ್ಯಕ್ರಮಗಳು ಈ ಬಾರಿಯ ‘ಇಕ್ವಲ್‌’ ಉತ್ಸವದ ವಿಶೇಷತೆಗಳಾಗಿವೆ. ಸೆಪ್ಟೆಂಬರ್‌ 13ರಂದು ಮೋಟ್ಲಿ ತಂಡದ ‘ಔರತ್‌! ಔರತ್‌!! ಔರತ್‌!!!’ ನಾಟಕದ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಈ ನಾಟಕವನ್ನು ನಿರ್ದೇಶಿಸಿದವರು ನಾಸಿರುದ್ದೀನ್‌ ಷಾ. ಸಂಜೆ 7.30ಕ್ಕೆ ಪ್ರದರ್ಶನವಾಗಲಿದೆ. ರಾತ್ರಿ 9.30ಕ್ಕೆ ಪೆಲ್ವಾ ನಾಯಕ್‌ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸೆ.14ರಂದು ಬೆಳಿಗ್ಗೆ 11ಕ್ಕೆ ಅರುಣಾ ರಾಯ್‌ ಅವರ ಪ್ರಧಾನ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. 12.30ಕ್ಕೆ ಸಂವಾದ ಕಾರ್ಯಕ್ರಮ, ಸಂಜೆ 7.30ಕ್ಕೆ ಧ್ವನಿ ವಿಜ್ ನಿರ್ದೇಶನದ ‘ಭಾಗಿ ಹುಯಿ ಲಡ್ಕೀಯಾ’ ನಾಟಕದ ಪ್ರದರ್ಶನ ನಡೆಯಲಿದೆ. ಸೆ.15 ಭಾನುವಾರ ಬೆಳಿಗ್ಗೆ 11ಕ್ಕೆ ಸಂವಾದ ಕಾರ್ಯಕ್ರಮ, 12.30ಕ್ಕೆ ಪ್ರೀತಿ ಹಾಗೂ ಯುದ್ಧದ ಕವಿತೆಗಳ ಓದು, 3.30ಕ್ಕೆ ಎ. ಮಂಗೈ ನಿರ್ದೇಶನದ ‘ಫ್ರೀಡಂ ಬೇಗಂ’ ನಾಟಕ ಪ್ರದರ್ಶನವಾಗಲಿದೆ. ಸಂಜೆ 5.30ಕ್ಕೆ ಉಮಾ ಹಾಗೂ ನಾರಾಯಣಸ್ವಾಮಿ ಅವರಿಂದ ‘ಸಾಂಗ್ಸ್‌ ಫ್ರಂ ದಿ ಸಾಯಲ್‌’, ರಾತ್ರಿ 7.30ಕ್ಕೆ ಸುರ್ಜಿತ್ ನಾಂಗ್ಮೆಕಾಪಮ್ ನಿರ್ದೇಶನದ ‘ನವ್ರ್ಸ್’ ಎಂಬ ನಾಟಕ ಪ್ರದರ್ಶನವಾಗಲಿದೆ. 9.30ಕ್ಕೆ ಟಿ.ಎಂ. ಕೃಷ್ಣ ಅವರ ಸಂಗೀತ ಕಾರ್ಯಕ್ರಮ ನಡೆಯಲಿದೆ.

courtsey:prajavani.net

https://www.prajavani.net/artculture/art/ranga-shankaras-equal%E2%80%93-voices-663232.html

Leave a Reply