ಬುಧುವಾರ, 23 ನವೆಂಬರ್ 2016 ರಂದು ‘ಬೆಳಿಗ್ಗೆ’ 10.30ಕ್ಕೆ ಧಾರವಾಡದ ಮನೋಹರ ಗ್ರಂಥ ಮಾಲಾದ ಡಾ. ‘ಗಿರಿ’ಯವರ ‘ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ’ ಗ್ರಂಥದ ಲೋಕಾರ್ಪಣೆ ಸಮಾರಂಭ ಧಾರವಾಡದಲ್ಲಿ ನಡೆಯಲಿದೆ. ಖ್ಯಾತ ವಿದ್ವಾಂಸರೂ, ವಿಮರ್ಶಕರಾದ ಶ್ರೀ ಜಿ. ಎಚ್. ನಾಯಕ, ಡಾ. ಗಿರಡ್ಡಿ ಗೋವಿಂದರಾಜ, ಶ್ರೀ ಜಿ. ಪಿ. ಬಸವರಾಜು ಮತ್ತು ಶ್ರೀ ಪಂಡಿತಾರಾಧ್ಯರು ವೇದಿಕೆಯಲ್ಲಿದ್ದು ಗ್ರಂಥ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಸಂವಾದವೊಂದನ್ನು ನಡೆಸಿಕೊಡಲಿದ್ದಾರೆ. ಕೃತಿಯ ಲೇಖಕರಾದ ಡಾ. ‘ಗಿರಿ’ಯವರು (ಡಾ. ಮಹಾಬಲಗಿರಿ ಎನ್. ಹೆಗಡೆ) ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

You must log in to post a comment.