ಅಂಚೆಯ ಅಣ್ಣ ಬಂದಿಹೆ ಚಿಣ್ಣ ಅಂಚೆಯ ಹಂಚಲು ಮನೆಮನೆಗೆ

“ಅಂಚೆಯ ಅಣ್ಣ ಬಂದಿಹೆ ಚಿಣ್ಣ ಅಂಚೆಯ ಹಂಚಲು ಮನೆಮನೆಗೆ…,
ಸಾವಿರ ಸುದ್ದಿಯ ಬೀರುತ ಬರುವನು ತುಂಬಿದ ಚೀಲವು ಹೆಗಲೊಳಗೆ…..!”
ನಮ್ಮ ಪ್ರಾಥಮಿಕ ಶಾಲೆಯಲ್ಲಿ ಖುಷಿ, ಖುಷಿಯಿಂದ ಹಾಡುತ್ತಿದ್ದ ಈ ಪದ್ಯ ನೆನಪಾಗಲು ಕಾರಣ ಇಂದು ವಿಶ್ವ ಅಂಚೆಯ ದಿನ… ಈಗ ಹಳೆಯ ಪೋಸ್ಟ್ ಕಾಡ್ರ್ಗಳೇನಾದರೂ ಕಣ್ಣಿಗೆ ಬಿದ್ದಾಗ, ಬಾಲ್ಯದಲ್ಲಿ ಮನೆಗೆ ಬರುತ್ತಿದ್ದ ಪತ್ರಗಳು, ಪತ್ರ ಬರೆಯುತ್ತಿದ್ದ ಆ ದಿನಗಳು ಅದೆಷ್ಟು ಸೊಗಸು….! ಅಂಚೆಯಣ್ಣ ಬೇರೆ ಯಾರೋ ಆಗಿರಲಿಲ್ಲ, ನಮ್ಗೆ ಒಬ್ಬ ನಿಕಟ ಬಂಧುವಾಗಿದ್ದ. ಆತ ಕೆಲವರಿಗೆ ಪತ್ರ ಓದಿ ಹೇಳುತ್ತಿದ್ದರೆ ಇನ್ನೂ ಕೆಲವರಿಗೆ ಪತ್ರ ಬರೆದೂ ಕೊಡುತ್ತಿದ್ದ. ಆತ ಕಾಣದಿದ್ದರೆ ಏನೋ ಚಡಪಡಿಕೆ… ಊರಿಗೆ ಬಂದರೆ ನಮ್ಮ ಮನೆಗೆ ಬರುವನೇ ಎಂದು ಕಾತರದಿಂದ ಕಾಯುತ್ತಿದ್ದೆವು.ಆತ ಏನಾದರೂ ಒಂದು ಪತ್ರ ಕೊಟ್ಟರೇ ಅಂದು ಅದೇನೋ ಸಂಭ್ರಮ… ! ಪತ್ರ ಬರೆಯುವುದು ಹಾಗೆ ಬರೆದ ಪತ್ರಗಳಿಗೆ ತಿರುಗಿ ಬರಬೇಕಾದ ಉತ್ತರಗಳಿಗಾಗಿ ಕಾಯುತ್ತಿದ್ದ ದಿನಗಳು ಅದೆಷ್ಟು ಚೆಂದ ಇದ್ದವು ಅಲ್ಲವೇ…!? ಈಗ ಮಾಹಿತಿ ತಂತ್ರಜ್ಞಾನದ ವೇಗದಿಂದಾಗಿ ಆ ಖುಷಿಯ ಕ್ಷಣಗಳು ಕಾಣೆಯಾದವು.

ಹೊಸ್ಮನೆ ಮುತ್ತು

Leave a Reply