ಕಟಿಂಗ್ ಕಟಿಂಗ್..

ಕಟಿಂಗ ಕಟಿಂಗ ..

ಲೇ ರಾಮ್ಯಾ ..ರಾಮ್ಯಾ
ಅವ್ವ ಬಂದೆ..ಬಂದೆ..ಹೇಳ ವಾ
ಟೈಮ್ ನೋಡ ಅಲ್ಲೆ ಯೋಳು ಆತ ಕಟಿಂಗ ಮಾಡಸಿ ಕೊಂಡ ಬಾ ಹೋಗ ಶ್ರಾವಣ ಬಂತಂದ್ರ ಆಗುದಿಲ್ಲಾ…
ಹೊಂಟೆ ಹೊಂಟೆ.
ಲೇ ಎಷ್ಟ ಲಗು ಬಂದಿ ಲೆ?…
ಅಯ್ಯ ಸುಡ್ಲಿ..ಏನ ಕಟಿಂಗ ಇದು? ಕೂದಲ ತಗದಿಲ್ಲ..ಕೆಳಗ ಸಣ್ಣ ಮ್ಯಾಲೆ ತಗದಿಲ್ಲಾ..ಅಲ್ಲಾ ಎರಡ ಗೆರಿ ಏನಿವು?ನಾಯಿಗೆ ಬರಿ ಕೊಟ್ಟಂಗ?..
ಹೋಗ ಹೋಗ ವಾಪಸ್ ಹೋಗ? ರೊಕ್ಕ ಏನ ಮ್ಯಾಲಿಂದ ಉದರತಾವೇನ ಮಗನಾ?
ನಾ ಹೊಗುದಿಲ್ಲಾ ನಾನ ಹೇಳಿ ಮಾಡಸಿನಿ.ಹೊಸ ಸ್ಟೈಲ್ ಇದ..

ನೀ ಹಿಂಗ ಕೇಳುದಿಲ್ಲ ತಡಿ ಪವ್ಯಾಗ ಹೇಳ್ತೀನಿ ಹಲೋ ಹಲೋ ಪವ್ಯಾ ನೀ ಒಂದ ಕೆಲಸಾ ಮಾಡ ನಿಂತ ಕಾಲ ಮ್ಯಾಲೆ ಮನಿಗೆ ಬಾ ಲಗು ನಿನ್ನ ತಮ್ಮ ನ ಒಂದ ಕೈ ತಗೋ ಬಾ಼
ಬಂದೆ ಬಂದೆ..
.ಅವ್ವ ಅವ್ವ.. ಓ ಪವ್ಯಾ ಬಾ ಒಳಗ ರಾಮ್ಯಾ ನ ತಲಿ ನೋಡ ಅಲ್ಲೇ ..
ಏನ ಆಗ್ಯದ ಅವನ ತಲಿಗೇ?

ಅಯ್ಯ ನನ್ನ ಕರ್ಮ ಲೇ ಪವ್ಯಾ ಏನ ಕಟಿಂಗ ಇದ ನಿಂದ ?ಏನ ಎರಡ ಗೆರಿ ಹೊಗ್ಗೋ…ನಿನ್ನ ನಾ ಒಳೆ ಕರದೆ?ಅಂವಗ ಬುದ್ಧಿ ಹೇಳಲಿಕ್ಕೆ…
ವಿಜಯ ಇನಾಮದಾರ
ಧಾರವಾಡ
#ನಮ್ಮಧಾರವಾಡ
#ನಮ್ಮಧಾರವಾಡಭಾಷೆ
#Dharwad
#NammaDharwad
#ಧಾರವಾಡ

Leave a Reply