ಎಲೆಲೇ ಎಲೆ ಕೀಟ…!

ಎಲೆಲೇ ಎಲೆ ಕೀಟ…!

ಪ್ರಕೃತಿಯ ಒಡಲೊಳಗೆ ಅನೇಕ ಅಚ್ಚರಿಗಳು ಅಡಗಿಕೊಂಡಿವೆ. ಆಗೀಗ ಅವು ನಮ್ಮ ಕಣ್ಣಿಗೆ ಬಿದ್ದು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಈ ಚಿತ್ರದಲ್ಲಿ ಎಲೆಯಂತೆ ತೋರುವ ವಸ್ತು ಎಲೆಯಲ್ಲ. ಇದೊಂದು ಹಸಿರು ಎಲೆ ಕೀಟ. (ಆಂಗ್ಲ ಭಾಷೆಯಲ್ಲಿ ಇದಕ್ಕೆ ವಾಕಿಂಗ್ ಲೀಫ್ ಎನ್ನುತ್ತಾರೆ) ಮೊದಲ ನೋಟಕ್ಕೆ ಎಲೆಯೆಂಬ ಭ್ರಮೆ ಹುಟ್ಟಿಸುತ್ತದೆ. ಅನೇಕ ಕೀಟಗಳಿಗೆ ತಾವು ವಾಸಿಸುವ ಪರಿಸರಕ್ಕೆ ಬೇಕಾದ ರೂಪ ಪಡೆದು ಅಲ್ಲೇ ಬೆರೆತು ಜೀವಿಸುವ ಕಲೆ ಸಿದ್ಧಿಸಿರುತ್ತದೆ. ಹೀಗಾಗಿ ಎಲೆಗಳಿಗೂ ಇವಕ್ಕೂ ವ್ಯತ್ಯಾಸ ತಿಳಿಯುವುದಿಲ್ಲ. ಎಲೆಯಂತೆ ದೇಹ ರಚನೆ ಹೊಂದಿರುವ ಈ ಎಲೆ ಕೀಟಗಳು ಎಲೆಗಳ ಮಧ್ಯೆ ಜೀವಿಸುತ್ತಾ, ತಮಗೆ ಅಪಾಯ ಎದುರಾದಾಗ ಎಲೆಯ ನಡುವೆಯೇ ಒಂದಾಗಿ, ವೈರಿಗಳಿಂದ ಪಾರಾಗುತ್ತವೆ. ಅಪರೂಪದ ಈ ಎಲೆ ಕೀಟ ಕಂಡು ಬಂದಿದ್ದು ಕಾರವಾರ ಜಿಲ್ಲೆಯ ದಾಂಡೇಲಿ ಅರಣ್ಯ ಪ್ರದೇಶದ ಪರಿಸರದಲ್ಲಿ.

ಹೊಸ್ಮನೆ ಮುತ್ತು

Leave a Reply