ಹತ್ತಿಯ ಎಳೆ ತೆಗೆಯುವ ಸಾಧನ…!

ಹತ್ತಿಯ ಎಳೆ ತೆಗೆಯುವ ಸಾಧನ…!
ಇದೊಂದು ಪುರಾತನ ಕಾಲದ ಹತ್ತಿಯ ಎಳೆ (ನೂಲು) ತೆಗೆಯುವ ಸರಳ ಸಾಧನ, ಈ ಪರಿಕರದ ಎಲ್ಲಾ ಭಾಗವೂ ಮರದಿಂದಲೇ ನಿರ್ಮಾಣಗೊಂಡಿರುವುದೊಂದು ವಿಶೇಷ. ಚರಕದಿಂದ ನೂಲು ತೆಗೆಯುವುದು ನಮಗೆಲ್ಲಾ ತಿಳಿದಿದೆ. ಚರಕದ ಮಾದರಿಗಿಂತ ಕೊಂಚ ಭಿನ್ನವಾದ ಚರಕದ ಮಾದರಿಗಿಂತ ಕೊಂಚ ಭಿನ್ನವಾದ, ಚರಕದ ಆವಿಷ್ಕಾರಕ್ಕಿಂತಲೂ ಮೊದಲು ಚಾಲ್ತಿಯಲ್ಲಿದ್ದ ಈ ಸಾಧನದಿಂದ ಪೂಜಾರತಿಗೆ ಬೇಕಾದ ಬತ್ತಿ, ದೇವರ ಅಲಂಕಾರಕ್ಕೆ ಬೇಕಾದ ಗೆಜ್ಜೆ ವಸ್ತ್ರ ತಯಾರಿಸಲು ಅವಶ್ಯವಾದ ಹತ್ತಿಯ ಎಳೆಗಳನ್ನು ತೆಗೆಯುತ್ತಿದ್ದರು. ಗಣೇಶ ಚೌತಿಯ ನಂತರ ಮಲೆನಾಡಿನ ಕೆಲ ಭಾಗಗಳಲ್ಲಿ ಅಷ್ಟಮಿ (ಎಳೆಯಷ್ಟಮಿ) ಎಂಬ ಹಬ್ಬವನ್ನು ಆಚರಿಸಲಾಗುತ್ತದೆ; ಹತ್ತಿಯ ಎಳೆಯನ್ನು ದೇವರ ಮುಂದೆ ಇಟ್ಟು ಪೂಜಿಸುವುದು ಈ ಹಬ್ಬದ ವಿಶೇಷ. ಈ ಕಾರಣಕ್ಕಾಗಿಯೇ ಹತ್ತಿಯ ಎಳೆ ತೆಗೆಯಲು ಈ ಸಾಧನ ಬಳಕೆಯಾಗುತ್ತಿತ್ತು. ಪುರಾತನ ಕಾಲದಿಂದ ಬಳುವಳಿಯಾಗಿ ಬಂದ ಪರಿಕರಗಳು ಅಂದಿನ ಕಾಲದ ಜೀವನ ಪದ್ಧತಿಯನ್ನು ವಿವರಿಸುತ್ತವೆ.

Leave a Reply