ಹಬ್ಬ ಬಂತಂದ್ರ

ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ  ತಗೋಂಡ ಬಾ ಸೈಕಲ ತಗೋಂಡ ಹೋಗ ಮತ್ತ.

ಅಲ್ಲರ್ರಿ ಚೌಕಟ್ಟಿಗೆ ಮಾವಿನ ತೋಳಲು ಕಟ್ಟಿರ್ರಿ.ಹಾ ಕಟ್ಟಿನಿ ಮಾಲಿ ತಂದಿನಿ.ಹಾಲ ತಂದಿನಿ.ಕೈಶಾವಿಗೆ ಬಂದಾವ.ರಂಗೋಲಿ ಹಾಕರ್ರಿ.ಅಲ್ಲಾ ಬಾಳಿ ಎಲಿ ಬಂದೂವು ಬಡಸರ್ರಿ.

ಅಮ್ಮಾ ನನಗ ಹಸಿವಿ ಆಗ್ಯದ.ಆತು ಆತು ಆರತಿ ಆತಂದ್ರ ಕೂಡ್ರಿ.

ಗಂಧ ಹಚ್ಚಗೋರ್ರಿ.ಹೋಳಿಗಿ,ಕಡಬು,ಭಜಿ,ಕೋಸಂಬ್ರಿ ಬಡಸರ್ರಿ.ಎಲ್ಲಾರೂ ಮೋಸರು ಅನ್ನ ಊಣ ಬೇಕಾ ಮತ್ತ.

ಇನ್ನೋಂದ ಹೋಳಿಗಿ ತಗೋ ಅದಕೇನ ಆಗತದ.

ಹಬ್ಬ ಬಂತಂದ್ರ ಇಷ್ಟ ಅಳತಿ ಎಲ್ಲಾರ ಮನ್ಯಾಗ ಗದ್ದಲಾ.

ನಾಗಪ್ಪಾ ಗಣಪ್ಪಾ ಆಹಾ ಹಾ ಉಂಡಿ ಮೋದಕಾ ಹೋಳಿಗಿ ಮ್ಯಾಲೆ ಎರಡ ಚಮಚ ತುಪ್ಪಾ ಬಿತ್ತಂದ್ರ ಅ ಅ ಬ್ಬ

ವಿಜಯ ಇನಾಮದಾರ

ಧಾರವಾಡ

 

 

Leave a Reply