ಕಲ್ಗಡಿಗೆ!

ಕಲ್ಗಡಿಗೆ!

ಹಿಂದಿನ ಕಾಲದಲ್ಲಿ ಅಡುಗೆ ತಯಾರಿಸಲು ಮಣ್ಣಿನ ಮಡಕೆಗಳಲ್ಲದೇ ಕಲ್ಲಿನ ಪಾತ್ರೆಗಳೂ ಬಳಕೆಯಾಗುತ್ತಿದ್ದವು. ನೀರು ತುಂಬಿಟ್ಟುಕೊಳ್ಳುವ ಹರವಿ, ಕೊಡವಲ್ಲದೇ ಬಾಣಿಗೆ, ಮಗೆ, ಹುಗ್ಗಿ ಚಟಿ`ಗೆ, ಹಾಲು ಚಟಿಗೆ, ಹಣತೆಗಳು ಮಣ್ಣಿನವುಗಳಾದರೆ, ದೋಸೆ ಹಂಚು, ರೊಟ್ಟಿ ಹಂಚು, ಪಡ್ಡು ಹಂಚು, ಧೂಪಾರತಿಗಳು ಕಲ್ಲಿನಿಂದಲೇ ತಯಾರಾಗುತ್ತಿದ್ದವು. ಇವು ಭಾರತದ ಅತ್ಯಂತ ಪುರಾತನ ಅಡುಗೆ ಪರಿಕರಗಳು. ನಮ್ಮ ಪೂರ್ವಜರು ಅಡುಗೆ ಸಲಕರಣೆಗಳನ್ನು ಕೂಡ ಅತ್ಯಂತ ಕಲಾತ್ಮಕವಾಗಿ ತಯಾರು ಮಾಡಿದ್ದರು. ಚಿತ್ರದಲ್ಲಿ ಕಾನುವ ಅಗಲ ಬಾಯುಳ್ಳ ಪಾತ್ರೆಯನ್ನು ಕಲ್ಗಡಿಗೆ, ಕಲ್ಸಾರೆ ಅಥವಾ ಕಲ್ಮರಿಗೆ ಎಂದು ಕರೆಯಲಾಗುತ್ತದೆ. ಮೃದು ಬಳಪದ ಕಲ್ಲಿನಿಂದ ತಯಾರಾಗುವ ಈ ಪಾತ್ರೆಗಳಲ್ಲಿ ಮಾಡಿದ ಅಡುಗೆ ತುಂಬಾ ರುಚಿಕರವೂ ಆರೋಗ್ಯಕರವೂ ಆಗಿರುತ್ತದೆಂಬ ಭಾವನೆ ಇತ್ತು. ಈ ಪರಿಕರ ಒಮ್ಮೆ ಬಿಸಿಯಾದರೆ ಬೇಗ ಆರುವುದಿಲ್ಲ. ಹೀಗಾಗಿ ಇದರಲ್ಲಿ ಮಾಡಿ ಇಡುವ ಆಹಾರ ಪದಾರ್ಥಗಳು ಹೆಚ್ಚು ಕಾಲ ತಾಜಾತನದಿಂದ ಕೂಡಿರುತ್ತದೆ. ತಂತ್ರಜ್ಞಾನದ ಆವಿಷ್ಕಾರದ ಫಲವಾಗಿ ಮರ, ಬಿದಿರು, ಮಣ್ಣು ಹಾಗೂ ಕಲ್ಲಿನಿಂದ ತಯಾರಿಸಿದ ಸಾಂಪ್ರದಾಯಿಕ ಸಲಕರಣೆಗಳು ಈಗ ಬಳಕೆಯಿಂದ ದೂರಾಗಿವೆ.

ಹೊಸ್ಮನೆ ಮುತ್ತು

Leave a Reply