ಕಾಮಧೇನು….!

ಕಾಮಧೇನು….!

ಸಮುದ್ರಮಥನದ ಸಮಯದಲ್ಲಿ ಕ್ಷೀರಸಮುದ್ರದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ ಇಂದ್ರನಿಗೆ ಲೋಕ ಕಲ್ಯಾಣಾರ್ಥವಾಗಿ ನೀಡಲಾಯಿತಂತೆ. ದೇವಲೋಕದ ಹಸುವಾದ ಈ ಕಾಮಧೇನುವಿನ ಮಗಳೇ ನಂದಿನಿ. ಇದು ವಶಿಷ್ಟ ಋಷಿಗಳ ಆಶ್ರಮದಲ್ಲಿದ್ದ ಹಸು. ಕಾಮಧೇನು ಎಂದರೆ ಕಾಮಿಸಿದ್ದನ್ನು ಕೊಡುವ ಧೇನು; ಅಂದರೆ ನಾವು ಬೇಡಿದ್ದನ್ನು ಕೊಡುವ ಹಸು ಎಂಬರ್ಥ. ಈ ಕಲಾವಿದನ ಕಲ್ಪನೆಯಲ್ಲಿ ಅರಳಿ, ವಸ್ತು ಪ್ರದರ್ಶನವೊಂದರಲ್ಲಿ ಪ್ರದರ್ಶನಗೊಂಡು ತನ್ನ ರೂಪ, ಲಾವಣ್ಯಗಳಿಂದ ನೋಡುಗರ ಗಮನ ಸೆಳೆಯುತ್ತಿತ್ತು.

ಹೊಸ್ಮನೆ ಮುತ್ತು

Leave a Reply