ಮುಖವಾಡ !

ಮುಖವಾಡ !
ಬದುಕಿನ ಈ ಅನಂತ ಯಾತ್ರೆಯಲಿ
ಗುರುತು ವಿಳಾಸಗಳ
ಲಗ್ತಿಸಬೇಕೆಂದರು
ಲಗ್ತಿಸುವುದಾದರೂ ಹೇಗೆ?

ದಿನವೂ ಬದಲಾಯಿಸಲೇ
ಬೇಕಾದ ಮುಖವಾಡಗಳಲಿ
ಅಸಲಿ ಮುಖದರ್ಶನವ
ಗುರುತಿಸಲಿ ಹೇಗೆ ?

ಕಾಲಿಗೆ ಚಕ್ರ ಕಟ್ಟಿದಂತೆ
ತಿರುಗಲೇಬೇಕಾದ
ಈ ಇಳೆಯೊಳಗೆ ಒಂದೆಡೆ
ನಿಂತೆನಾದರೂ ಹೇಗೆ?

ಸುತ್ತ ಗಿರಕಿ ಹೊಡೆಯುತ
ನಿತ್ಯ ಬದಲಾಗುವೀ ನೂರೆಂಟು
ಇಸಂಗಳ ಮಧ್ಯದಲ್ಲಿ, ಒಂದನೇ
ಅಪ್ಪಿಕೂರುವುದಾದರೂ ಹೇಗೆ ?

ಹೊಸ್ಮನೆ ಮುತ್ತು

Leave a Reply