ಕಾಫಿ ಬೀಜ ಪುಡಿ ಮಾಡುವ ಪರಿಕರ
ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯ ಪೇಯಗಳಲ್ಲೊಂದಾಗಿದೆ. ಕೆಲವರಿಗೆ ಕಾಫಿ ಇಲ್ಲದೇ ದಿನ ಆರಂಭವಾಗುವುದಿಲ್ಲ. ಅದು ಈಗ ಬರಿ ಪಾನೀಯವಾಗಿಯಷ್ಟೇ ಉಳಿದಿಲ್ಲ. ಕೋಟ್ಯಾಂತರ ಜನರ ಜೀವನದ ಭಾಗ ಕೂಡಾ ಎಲ್ಲರಿಗೂ ಒಂದಲ್ಲ ಒಂದು ಕಾರಣಕ್ಕೆ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ನಾಸಿಕದ ಹೊಳ್ಳೆಗಳನ್ನು ಅರಳಸಿ ಹಬೆಯಾಡುವ ಕಾಫಿಯ ಸುವಾಸನೆಯನ್ನು ಆಘ್ರಾಣಿಸುತ್ತಾ ಹನಿಹನಿಯಾಗಿ ಕಾಫಿಯನ್ನು ಹೀರುತ್ತಿದ್ದರೆ ಆ ಸುಖವೇ ಬೇರೆ. ಆಧುನಿಕತೆಯಿಂದಾಗಿ ಈಗ ಕಾಫಿ ಬೀಜವನ್ನು ಹುರಿದು, ಪುಡಿ ಮಾಡಲು ಅನೇಕ ಸ್ವಯಂಚಾಲಿತ ಯಂತ್ರಗಳೇ ಬಂದಿವೆ. ಹಿಂದೆ ಈ ಸೌಲಭ್ಯ ಇರಲಿಲ್ಲ. ಆಗ ಮನೆಯಲ್ಲೇ ಸುಲಭವಾಗಿ ಕಾಫಿ ಬೀಜ ಪುಡಿ ಮಾಡಲು ಅನುಕೂಲವಾಗುವಂತಹ ಚಿಕ್ಕ ಪರಿಕರವೊಂದಿತ್ತು. ಕೈಯಿಂದ ತಿರುಗಿಸುತ್ತಾ ಕೆಲವೇ ಕೆಲವು ಬೀಜಗಳನ್ನು ಹಾಕಿ ಪುಡಿ ಮಾಡಿಕೊಳ್ಳಬೇಕಿತ್ತು. ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಇಂದಿನ ಎಲ್ಲಾ ಕ್ಷೇತ್ರಗಳಲ್ಲಿ ಗ್ರಾಮೀಣ ಸೊಗಡಿನ ಪಾರಂಪರಿಕ ಪರಿಕರಗಳು ಮೂಲೆಗುಂಪಾಗುತ್ತಿವೆ.
ಹೊಸ್ಮನೆ ಮುತ್ತು

You must log in to post a comment.