ಕತ್ತಿ ಮಸೆಯುವ ಸಾಧನ

ಕತ್ತಿ ಮಸೆಯುವ ಸಾಧನ
ಇದೊಂದು ಹಳೇ ಕಾಲದ ಕತ್ತಿ ಮಸೆಯುವ ಸಾಧನ. ಈ ಮಸೆಗಲ್ಲು ಕೃಷಿ ಆಯುಧಗಳಾದ ಕತ್ತಿ, ಕುಡಗೋಲು ಮುಂತಾದ ವಸ್ತುಗಳನ್ನು ಉಜ್ಜಿ ಹರಿತಗೊಳಿಸಲು ನೆರವಾಗುತ್ತಿತ್ತು. ಈ ಮಸೆಯುವ ಪರಿಕರ ಈಗ ಸುಸ್ಥಿತಿಯಲ್ಲಿಲ್ಲ. ಯಾಂತ್ರೀಕರಣದಿಂದಾಗಿ ಪರಿಕರಗಳನ್ನು ಹರಿತಗೊಳಿಸುವ ವಿದ್ಯುತ್ ಚಾಲಿತ ನವನವೀನ ಸಾಧನಗಳು ಚಾಲ್ತಿಗೆ ಬಂದಿವೆ. ಹೀಗಾಗಿ ಈ ಪರಿಕರ ನೇಪಥ್ಯಕ್ಕೆ ಸರಿದು ಕೇವಲ ಪಾರಂಪರಿಕ ವಸ್ತುಗಳ ಪ್ರದರ್ಶನ ಮಳಿಗೆಯಲ್ಲಿ ಕಂಡು ಬರುವಂತಾಗಿದೆ.
ಹೊಸ್ಮನೆ ಮುತ್ತು

Leave a Reply